ಪಣಂಬೂರು ಸಮೀಪ ಭೀಕರ ಸರಣಿ ಅಪಘಾತ | ಟ್ಯಾಂಕರ್ ಕಾರು ನಡುವೆ ಸಿಲುಕಿದ ರಿಕ್ಷಾ ; ಮೂವರು ಸಾವು

ಪಣಂಬೂರು ಸಮೀಪ ನಡೆದ ಸರಣಿ ಅಪಘಾತದಲ್ಲಿ ಮೂವರು ದಾರುಣ ಸಾವು ಕಂಡ‌ ಘಟನೆ ನಡೆದಿದೆ.

ಹಸು ರಸ್ತೆ ದಾಟುತ್ತಿದ್ದ ಸಂದರ್ಭ ಮೊದಲಿಗೆ ಗ್ಯಾಸ್ ಟ್ಯಾಂಕರ್ ಬ್ರೇಕ್ ಹಾಕಿ ನಿಲ್ಲಿಸಿದ್ದು, ಹಿಂದೆ ಬರುತ್ತಿದ್ದಆಟೋರಿಕ್ಷಾ ಚಾಲಕ ವಾಹನ ನಿಲ್ಲಿಸಿದಾಗ ಅದರ ಹಿಂದೆ ಇದ್ದಂತಹ ಇನೋವಾ ಚಾಲಕನು ಕೂಡ ನಿಲ್ಲಿಸಿರುತ್ತಾನೆ ಅದೇ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ರಭಸವಾಗಿ ವಾಹನಕ್ಕೆ ಡಿಕ್ಕಿ ಹೊಡೆದಾಗ ಇನೋವಾ ಕಾರು ರಭಸಕ್ಕೆಮುಂದೆ ಇದ್ದ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿರುತ್ತದೆ.
ಅದೇ ಸಂದರ್ಭದಲ್ಲಿ ಅಲ್ಲಿ ಇದ್ದ ರಿಕ್ಷಾ  ಮಧ್ಯೆ ಸಿಲುಕಿಕೊಂಡು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Post a Comment

Previous Post Next Post