ಜಾಗದ ಸರ್ವೆ ವೇಳೆ ದೈವ ಬಂದಂತೆ ಬೆಂಕಿ ಹಿಡಿದು ಹಲ್ಲೆ: ಕೊಪ್ಪ ತಾಲೂಕಿನ ಚಿಕ್ಕನಗುಂಡಿಯಲ್ಲಿ ನಡೆದ ಘಟನೆ

ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ಜಾಗದ ಸರ್ವೆ ವೇಳೆ ಅಚ್ಚರಿಯ ಘಟನೆ ನಡೆದಿದೆ. ಜಾಗದ ಗಡಿ ಸರ್ವೆ ಮಾಡಲು ಅಧಿಕಾರಿಗಳು ಸ್ಥಳಕ್ಕೆ ಬಂದ ಸಂದರ್ಭದಲ್ಲಿ, ಗ್ರಾಮಸ್ಥನೊಬ್ಬ ದೈವ ಬಂದಂತೆ ನಡೆದುಕೊಂಡು ಕೈಯಲ್ಲಿ ಬೆಂಕಿ ಹಿಡಿದು ಸರ್ವೆಗೆ ಹೋದವರ ಮೇಲೆ ಹಲ್ಲೆ ನಡೆಸಿದ್ದಾನೆ.

ಮಾಹಿತಿಯ ಪ್ರಕಾರ, ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಹಲವು ದಿನಗಳಿಂದ ಜಾಗದ ವಿವಾದ ನಡೆಯುತ್ತಿತ್ತು. ಈ ಸಂಬಂಧ ಅಧಿಕಾರಿಗಳು ಸರ್ವೆ ಮಾಡಲು ಸ್ಥಳಕ್ಕೆ ತೆರಳಿದ್ದರು. ಇದೇ ವೇಳೆ ಸುರೇಶ್ ಅಕಸ್ಮಾತ್ ಕೈಯಲ್ಲಿ ಬೆಂಕಿ ಹಿಡಿದು “ದೈವ ಬಂದಂತೆ” ನಡೆದುಕೊಂಡು ಸ್ಥಳಕ್ಕೆ ಬಂದು ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಮೇಲೆ ದಾಳಿ ನಡೆಸಿದ್ದಾನೆಂದು ತಿಳಿದುಬಂದಿದೆ.

ಈ ಘಟನೆಯಿಂದ ಸರ್ವೆ ಸಿಬ್ಬಂದಿಗಳು ಕ್ಷಣಕಾಲ ಶಾಕ್‌ಗೆ ಒಳಗಾಗಿದ್ದು, ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ವೇಳೆ ಸುರೇಶ್ ತನ್ನ ತಮ್ಮನ ಹೆಂಡತಿ ರಮ್ಯಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆಯ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post a Comment

Previous Post Next Post