2 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಕ್ಲೀನ್ ಸ್ವೀಪ್ ಮೂಲಕ ಸರಣಿ ಗೆದ್ದು, ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್‌ನಲ್ಲಿ ಮೊದಲ ಸರಣಿ ಗೆಲುವು ದಾಖಲಿಸಿದೆ. ಮಂಗಳವಾರ 1 ವಿಕೆಟ್ ನಷ್ಟಕ್ಕೆ 63 ರನ್‌ಗಳಿಂದ ಆಟ ಮುಂದುವರಿಸಿದ ಭಾರತಕ್ಕೆ ಗೆಲುವಿಗೆ ಕೇವಲ 58ರನ್‌ಗಳ ಅವಶ್ಯಕತೆ ಇತ್ತು ಆದರೆ ವೆಸ್ಟ್ ಇಂಡೀಸ್ ಬೌಲರ್‌ಗಳ ಶಿಸ್ತಿನ ದಾಳಿಯಿಂದ ರಕ್ಷಣಾತ್ಮಕ ತಾಳ್ಮೆಯುತ ಆಟವನ್ನು ಭಾರತೀಯ ಬ್ಯಾಟರ್‌ಗಳು ತಮ್ಮದಾಗಿಸಿಕೊಂಡರು. ಸಾಯಿ ಸುದರ್ಶನ್ 39 ರನ್ ಗಳಿಸಿ ಚೇಸ್‌ಗೆ ವಿಕೆಟ್ ಒಪ್ಪಿಸಿದರು. ಬಿರುಸಿನ ಆಟಕ್ಕೆ ಮುಂದಾದ ನಾಯಕ ಶುಭಮನ್ ಗಿಲ್ ಕೂಡ 13 ರನ್‌ಗಳಿಗೆ ತನ್ನ ಆಟ ಮುಗಿಸಿದರು.
ಕರ್ನಾಟಕದ ಹುಡುಗ ಕೆ.ಎಲ್.ರಾಹುಲ್ ತಮ್ಮ ಸ್ಥಿರ, ತಾಳ್ಮೆಯುತ ಇನ್ನಿಂಗ್ಸ್ ಮುಂದುವರಿಸುತ್ತಾ ಟೆಸ್ಟ್‌ನಲ್ಲಿ ಇಪ್ಪತ್ತನೆ ಅರ್ಧಶತಕ ದಾಖಲಿಸಿ, ತಂಡದ ಗೆಲುವಿನ ರನ್ ಬಾರಿಸಿದರು. ಅವರು 108 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಸಿಡಿಸಿದರು.
ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಅಜೇಯ 6 ರನ್ ಬಾರಿಸಿದರು. ಈ ಮೂಲಕ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ತಂಡ 43ನೇ ಹುಟ್ಟುಹಬ್ಬದ ಸಂದರ್ಭ ಭರ್ಜರಿ ಉಡುಗೊರೆ ನೀಡಿದೆ.ಭಾರತದ ಹೊಸ ದಾಖಲೆ : ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದ ಭಾರ ನೂತನ ದಾಖಲೆಯನ್ನೂ ನಿರ್ಮಿಸಿದೆ. ಒಂದು ತಂಡದ ವಿರುಧ್ದ ಸತತ 10ನೇ ಸರಣಿ ಗೆಲುವಿನ ನಗೆ ಬೀರಿದಂತಾಗಿದೆ.
Post a Comment