ಮಂಗಳೂರು | ಸಂಗೀತ್ ಭಾರತಿ ವತಿಯಿಂದ ಸೆ.27ರಂದು ‘ಸ್ವರ ತರಂಗ’ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ

ಮಂಗಳೂರು: ಸಂಗೀತ್ ಭಾರತಿ ಫೌಂಡೇಶನ್ ವತಿಯಿಂದ ಕರ್ನಾಟಕ ಬ್ಯಾಂಕ್ ಸಹಯೋಗದಲ್ಲಿ ‘ಸ್ವರ ತರಂಗ’ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ಸೆಪ್ಟೆಂಬರ್ 27ರಂದು ಮಂಗಳೂರಿನಲ್ಲಿ ನಡೆಯಲಿದೆ.
ಭಾನುವಾರ ಸಂಜೆ 5.30ಕ್ಕೆ ಉರ್ವದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಶಾಸ್ತ್ರೀಯ ಗಾಯಕಿ ವಿದುಷಿ ರುಚಿರಾ ಪಂಡ ಅವರು ಗಾಯನ ಪ್ರಸ್ತುತಪಡಿಸಲಿದ್ದು, ಅವರಿಗೆ ಸತೀಶ್ ಭಟ್ ಹೆಗ್ಗಾರ್ ಅವರು ಹಾರ್ಮೋನಿಯಂ ಹಾಗೂ ಯಶವಂತ್ ವೈಷ್ಣವ್ ಅವರು ತಬಲಾದಲ್ಲಿ ಸಹಕಾರ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಖ್ಯಾತ ಸಂತೂರ್ ವಾದಕ ಅಭಯ್ ರುಸ್ತುಂ ಸೊಪೋರಿ ಅವರ ಸಂತೂರ್ ವಾದನವೂ ನಡೆಯಲಿದೆ. ಅವರಿಗೆ ತಬಲಾದಲ್ಲಿ ಯಶವಂತ್ ವೈಷ್ಣವ್ ಅವರು ಸಾಥ್ ನೀಡಲಿದ್ದಾರೆ.

ಸಂಗೀತಾಸಕ್ತರಿಗೆ ಶಾಸ್ತ್ರೀಯ ಸಂಗೀತದ ವೈವಿಧ್ಯಮಯ ಪ್ರಸ್ತುತಿಗಳನ್ನು ಆಸ್ವಾದಿಸುವ ಅವಕಾಶ ಕಲ್ಪಿಸಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಪ್ರೇಕ್ಷಕರು ಸಂಜೆ 5.15ರೊಳಗೆ ಆಗಮಿಸಿ ತಮ್ಮ ಆಸನಗಳನ್ನು ಕಾಯ್ದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

Post a Comment

Previous Post Next Post