ಮರಕಡ ಸಿದ್ದೀಖ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾಗಿ ಎಂ.ಮೈಯದ್ದಿ ಬ್ಯಾರಿ ಆಯ್ಕೆ

ಮಂಗಳೂರು: ಜಮಾತುಲ್ ಮುಸ್ಲಿಮೀನ್ ಕಮಿಟಿ (ರಿ.) ಅಧೀನದಲ್ಲಿರುವ ಸಿದ್ದೀಖ್ ಜುಮಾ ಮಸ್ಜಿದ್, ಮರಕಡ, ಕುಂಜತ್ತಬೈಲ್ ಇದರ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಹಾಸಭೆಯಲ್ಲಿ ನೆರವೇರಿತು.
ನೂತನ ಅಧ್ಯಕ್ಷರಾಗಿ ಎಂ. ಮೈಯದ್ದಿ ಬ್ಯಾರಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನೂರ್ ಮೊಹಮ್ಮದ್, ಕಾರ್ಯದರ್ಶಿಯಾಗಿ ಶಾಫಿ ಕುದ್ರೋಳಿ ಹಾಗೂ ಕೋಶಾಧಿಕಾರಿಯಾಗಿ ಬಶೀರ್ ಬೈಕಂಪಾಡಿ ಆಯ್ಕೆಯಾಗಿದ್ದಾರೆ.

ಉಸ್ತುವಾರಿಗಳಾಗಿ ಆರ್.ಕೆ. ಹಾಜಿ ಹಾಗೂ ನಾಸೀರ್ ಕಿನ್ನಿಕುಳ ನೇಮಕಗೊಂಡಿದ್ದಾರೆ. ಜೊತೆ ಕಾರ್ಯದರ್ಶಿಗಳಾಗಿ ಜಲೀಲ್ ಹಾಗೂ ಶೇಖ್ ಮೊಹಿದ್ದೀನ್ ಆಯ್ಕೆಯಾಗಿದ್ದಾರೆ.
ಲೆಕ್ಕ ಪರಿಶೋಧಕರಾಗಿ ನವಾಝ್ ಮರಕಡ ಆಯ್ಕೆಯಾಗಿದ್ದು, ಸದಸ್ಯರಾಗಿ ಹುಸೈನ್ ರಿಯಾಝ್, ಇಬ್ರಾಹಿಂ ಅತ್ರಬೈಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಮನ್ಸೂರ್, ಮೊಹಮ್ಮದ್ ಚೆಯ್ಯಾಬ್ಬ, ಬದ್ರು ಮುನೀರ್, ಅಶ್ರಫ್ ಕುಳ, ಮುನೀರ್ ಅಹಮ್ಮದ್ ಖಾನ್, ಮೊಹಮ್ಮದ್ ಝಿಯಾದ್ ಹಾಗೂ ಅಖೀಬ್ ಜ್ಯೋತಿ ನಗರ ಸೇರಿದಂತೆ ಇತರರು ಆಯ್ಕೆಯಾಗಿದ್ದಾರೆ.

ನೂತನ ಸಮಿತಿಗೆ ಸಭೆಯಲ್ಲಿ ಅಭಿನಂದನೆಗಳು ವ್ಯಕ್ತವಾಗಿದ್ದು, ಮುಂದಿನ ಅವಧಿಯಲ್ಲಿ ಮಸ್ಜಿದ್ ಅಭಿವೃದ್ಧಿ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಕರೆ ನೀಡಲಾಗಿದೆ.

Post a Comment

Previous Post Next Post