ಬಿಕರ್ನಕಟ್ಟೆ : ಟ್ಯಾಂಕರ್‌ನಿಂದ ಸೋರಿಕೆಯಾದ ಆಯಿಲ್ ; ದ್ವಿಚಕ್ರ ವಾಹನಗಳು ಸ್ಕಿಡ್, ಇಬ್ಬರಿಗೆ ಗಂಭೀರ ಗಾಯ

ಮಂಗಳೂರು ನಗರದ ನಂತೂರು ಪಡೀಲ್ ರಸ್ತೆಯ ಬಿಕರ್ನಕಟ್ಟೆ ಸಮೀಪದಿಂದ ರಸ್ತೆಯಲ್ಲಿ ಟ್ಯಾಂಕರ್ ಆಯಿಲ್ ಬಿದ್ದು, ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ರೀತಿಯಾಗಿ ಟ್ಯಾಂಕರ್ ವಾಹನದಿಂದ ಆಯಿಲ್ ಸೋರಿಕೆಯಾಗಿ ರಸ್ತೆಯಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿತ್ತು. ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿದ್ದು, ಇಬ್ಬರು ಸವಾರರಿಗೆ ಗಂಭೀರ ಗಾಯ ಉಂಟಾಗಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳೀಯರೆ ಆಯಿಲ್ ಸೋರಿಕೆಯಾದ ಕಡೆಗಳಲ್ಲಿ ಮಣ್ಣು ಹಾಕಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶವೂ ವ್ಯಕ್ತವಾಗಿದೆ.

Post a Comment

Previous Post Next Post