ಭಾರತೀಯ ಸಿನಿ ರಂಗದ ಗಾನಲೋಕದ ದಂತಕಥೆ, ಹಿರಿಯ ಗಾಯಕಿ ಆಶಾ ಭೋಂಸ್ಲೆ ನಿಧನ

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಭಾನುವಾರ ಇಹಲೋಕ ಪಯಣ ಮುಗಿಸಿದ್ದಾರೆ. ಈ ಮೂಲಕ ಗಾಯನ ಲೋಕದ ಅಪೂರ್ವ ತಾರೆಯೊಂದು ಕಳಚಿದಂತಾಗಿದೆ.

ಏಪ್ರಿಲ್ 11ರಂದು ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ಸಿನಿರಂಗದ ನಾನಾ ಭಾಷೆಗಳಲ ಸಹಸ್ರಾರು ಗೀತೆಗಳಿಗೆ ಧ್ವನಿಯಾಗಿರುವ ಆಶಾ ಭೋಂಸ್ಲೆ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Post a Comment

Previous Post Next Post