ಕುಂಜತ್‌ಬೈಲ್ : ನದಿಯಲ್ಲಿ ಮಗುಚಿಬಿದ್ದ ತೆಪ್ಪ ; ಮೀನು ಹಿಡಿಯಲು ತೆರಳಿದ್ದ ಇಬ್ಬರು ನೀರುಪಾಲು

ಮಂಗಳೂರು : ಮೀನು ಹಿಡಿಯಲು ತೆಪ್ಪದಲ್ಲಿ ಫಲ್ಗುಣಿ ನದಿಗೆ ತೆರಳಿದ್ದ ಮೂವರು ಯುವಕರ ಪೈಕಿ ಇಬ್ಬರು ನೀರುಪಾಲಾದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಕುಂಜತ್ ಬೈಲಿನಲ್ಲಿ ಬುಧವಾರ ನಡೆದಿದೆ.

ಕುಂಜತ್ ಬೈಲ್ ನಿವಾಸಿಗಳಾದ ಗಣೇಶ (28) ಹಾಗೂ ರಾಯಲ್ (27) ಎಂಬವರು ದೋಣಿ ಮುಗುಚಿ ನೀರುಪಾಲಾದವರು.

ನಸುಕಿನ 1.30 ಗಂಟೆ ಸುಮಾರಿಗೆ ಮೀನು ಹಿಡಿಯಲೆಂದು ಸಣ್ಣ ದೋಣಿಯಲ್ಲಿ ತೆರಳಿದ್ದರು. ನದಿ ಮಧ್ಯದಲ್ಲಿದ್ದಾಗ ಮೂವರು ಕೂಡ ದೋಣಿ ಮಗುಚಿ ನೀರಿಗೆ ಬಿದ್ದಿದ್ದು ಈಜಲು ಬಾರದ ಗಣೇಶ್ (28) ಹಾಗೂ ರಾಯಲ್ (24) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನಿತೇಶ್ (29) ಎಂಬವರು ಈಜಿ ದಡ ಸೇರಿರುತ್ತಾರೆ. ನದಿಯಲ್ಲಿ ಮುಳುಗಿದ್ದ ವ್ಯಕ್ತಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಳುಗು ತಜ್ಞರು ಮಧ್ಯಾಹ್ನ ವೇಳೆಗೆ ಪತ್ತೆ ಮಾಡಿದ್ದು ಗಣೇಶ್ ಮೃತದೇಹ ಸಿಕ್ಕಿದೆ. ರಾಯಲ್ ಎಂಬಾತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1 Comments

  1. https://www.facebook.com/share/1CYKFLnHsm/

    ReplyDelete

Post a Comment

Previous Post Next Post