ಮೂಡುಕರೆ: ವಿಶ್ವಕರ್ಮ ಯುವಕ ಸಂಘ ಮೂಡುಕರೆ ಇದರ ಪ್ರಥಮ ಸಭೆಯು ಕಂದಾವರ ನಾಗೇಶ್ ಆಚಾರ್ಯ ಅವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ (ಚಂಚು) ಆಯ್ಕೆಯಾದರೆ, ಗೌರವಾಧ್ಯಕ್ಷರಾಗಿ ಪ್ರಭಾಕರ್ ಆಚಾರ್ಯ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ವಿಶ್ವಕರ್ಮ ಯುವಕ ಸಂಘ ಮೂಡುಕರೆ ಇದರ ನೂತನ ಅಧ್ಯಕ್ಷರಾಗಿ ಸಂತೋಷ (ಚಂಚು), ಗೌರವಾಧ್ಯಕ್ಷರಾಗಿ ಪ್ರಭಾಕರ್ ಆಚಾರ್ಯ, ಉಪಾಧ್ಯಕ್ಷರಾಗಿ ಗಣೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್, ಜಂಟಿ ಕಾರ್ಯದರ್ಶಿಯಾಗಿ ಕಿರಣ್ ಬೈಲು ಬೀಡಿನ ಬಳಿ ಹಾಗೂ ಕೋಶಾಧಿಕಾರಿಯಾಗಿ ಸತೀಶ್ (ಗುಂಡು) ಆಯ್ಕೆಯಾಗಿದ್ದಾರೆ.
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶಿವರಾಜ್, ರವಿ, ಅಕ್ಷಯ್, ಶರತ್ ಹಾಗೂ ಪ್ರೀತೇಶ್ ಆಯ್ಕೆಯಾದರು.
ಗೌರವ ಸಲಹೆಗಾರರು:
ನಾಗೇಶ್, ಜಯರಾಮ್, ಚಂದ್ರಹಾಸ್, ಉಮೇಶ್ ಕಾಜಿಲ ಹಾಗೂ ಮೋಹನ್ ಆಚಾರ್ಯ.
ಕಾರ್ಯಕಾರಿಣಿ ಸಮಿತಿ ಸದಸ್ಯರು: ಶಶಿಧರ್, ಧರ್ಮೋದರ್, ಯೋಗೀಶ್, ಸತೀಶ್ (ನಾರಾಯಣ), ಸತೀಶ್ (ತಿಮ್ಮಪ್ಪ), ಪ್ರಕಾಶ್ ಹಾಗೂ ಶಿವಾನಂದ.
ಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಯುವಕರನ್ನು ಒಗ್ಗೂಡಿಸಿ ಸಾಮಾಜಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಕುರಿತು ಚರ್ಚಿಸಲಾಯಿತು.
Post a Comment