Sangam Friends Club | ಮಂಗಳೂರು : ಜೆಪ್ಪಿನಮೊಗರು ಸಂಗಮ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾಗಿ ಸುಧಾಕರ್ ಜೆ. ಪುನರಾಯ್ಕೆ

ಮಂಗಳೂರು: ಜೆಪ್ಪಿನಮೊಗುರು ಸಂಗಮ್ ಫ್ರೆಂಡ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಸುಧಾಕರ್ ಜೆ. ಪುನರಾಯ್ಕೆಯಾದರೆ, ಗೌರವಾಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಸಂತೋಷ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿರಾಜ್ ಅಮೀನ್, ಕೋಶಾಧಿಕಾರಿಯಾಗಿ ಸಂದೇಶ್ ಕುಮಾರ್ ಹಾಗೂ ಜತೆ ಕಾರ್ಯದರ್ಶಿಯಾಗಿ ಜಯರಾಮ್ ಕೊಟ್ಟಾರಿ ಆಯ್ಕೆಯಾದರು. ಇದೇ ವೇಳೆ 20 ಸದಸ್ಯರ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕೀರ್ತಿರಾಜ್ ಅಮೀನ್ ಸ್ವಾಗತಿಸಿದರು. ಸಂದೇಶ್ ಕುಮಾರ್ ವಂದಿಸಿದರು.

Post a Comment

Previous Post Next Post