Karkala | ಅಪಘಾತ ತಡೆಗಟ್ಟಲು ಮಾರಿಗುಡಿ–ಅಮರಜ್ಯೋತಿ ಆಸ್ಪತ್ರೆ ರಸ್ತೆಯಲ್ಲಿ ನಿಮ್ನ ದರ್ಪಣ ಅಳವಡಿಸಿದ ಜೈ ತುಲುನಾಡ್ ಕಾರ್ಲ ಸಂಘಟನೆ

ಕಾರ್ಕಳ: ಜೈ ತುಲುನಾಡ್ (ರಿ.) ಕಾರ್ಲ ಸಂಘಟನೆಯ ಸಹಭಾಗಿತ್ವದಲ್ಲಿ ಇತ್ತೀಚೆಗೆ ಕಾರ್ಕಳ ಮಾರಿಗುಡಿಯಿಂದ ಅಮರಜ್ಯೋತಿ ಆಸ್ಪತ್ರೆಗೆ ತೆರಳುವ ರಸ್ತೆಯ ಬದಿಯಲ್ಲಿ ನಿಮ್ನ ದರ್ಪಣ (Convex Mirror) ಅಳವಡಿಸಿ ಉದ್ಘಾಟಿಸಲಾಯಿತು.

ಯಕ್ಷಗಾನ ಕಲಾವಿದ ರಾಮ ಭಟ್ ಅವರು ನಿಮ್ನ ದರ್ಪಣವನ್ನು ಉದ್ಘಾಟಿಸಿದರು. 
ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಭಟ್, ಅಬ್ದುಲ್ ರೆಹೆಮಾನ್ ಹಾಗೂ ವಿಕ್ರಮ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಜೈ ತುಲುನಾಡ್ ಕೇಂದ್ರ ಸಮಿತಿಯ ಹಣಕಾಸು ಸದಸ್ಯ ನಿಶಿಲ್ ಶೆಟ್ಟಿ ಬೇಲಾಡಿ ಹಾಗೂ ಜೈ ತುಲುನಾಡ್ ಕಾರ್ಲ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ತಮ್ಮ ಸಹಕಾರ ನೀಡಿದರು.

ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಳವಡಿಸಲಾದ ಈ ನಿಮ್ನ ದರ್ಪಣ ಸ್ಥಳೀಯ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಉಪಯುಕ್ತವಾಗಲಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

Post a Comment

Previous Post Next Post