ಶಕ್ತಿನಗರ : ಪಿಎಂಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ


ನಾಲ್ಯಪದವು : ಪದವು ಫ್ರೆಂಡ್ಸ್ ಕ್ಲಬ್ ಹಾಗೂ ವಿವಿಧ ದಾನಿಗಳ ಸಹಯೋಗದಲ್ಲಿ ಪಿಎಂಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಾಲ್ಯಪದವು, ಶಕ್ತಿನಗರ (ಮಂಗಳೂರು ದಕ್ಷಿಣ) ಇಲ್ಲಿನ 180 ವಿದ್ಯಾರ್ಥಿಗಳಿಗೆ ತಲಾ ಎರಡು ಜತೆ ಶಾಲಾ ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.

ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಅಬುಧಾಬಿ ನಿವಾಸಿ ಶ್ರೀ ಗೊಡ್ವಿನ್, ಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಚೆನ್ನಪ್ಪ ಶೆಟ್ಟಿಯವರ ಪುತ್ರ ಶ್ರೀ ಭುವನ್ ಶೆಟ್ಟಿ, ಸೋಲೆಕ್ಸ್ ಯೂನಿಫಾರ್ಮ್ ಸಂಸ್ಥೆಯ ಪಾಲುದಾರರಾದ ಶ್ರೀ ದೇವ್ ಶೆಟ್ಟಿ ಮತ್ತು ಶ್ರೀ ಶಾನ್ ಅವರ ಸಹಯೋಗದಲ್ಲಿ, ದುಬೈ ನಿವಾಸಿ ಹಾಗೂ ಪದವು ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಶ್ರೀ ಹರೀಶ್ ಬಂಗೇರ ಅವರ ಮುತುವರ್ಜಿಯಲ್ಲಿ ಈ ಸಮಾಜಮುಖಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರೀ ಜಗದೀಶ್ ಹಾಗೂ ಶ್ರೀ ದಯಾನಂದ ನಾಯ್ಕ್ ಅವರು ವಿಶೇಷ ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರೀನಿಧಿ ಹರೀಶ್ ಬಂಗೇರ, ಶ್ರೀಮತಿ ಮಾಲತಿ, ಶ್ರೀ ದೇವ್ ಶೆಟ್ಟಿ, ಶ್ರೀಮತಿ ಶರ್ಮಿಳಾ ದಯಾನಂದ ನಾಯ್ಕ್, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ರೀ ಕುಶಾಲ್ ಕುಮಾರ್, ವಿದ್ಯಾದೀವಿಗೆ ಟ್ರಸ್ಟ್ ಅಧ್ಯಕ್ಷ ಶ್ರೀ ದೇವಾನಂದ್, ದಾನಿಗಳಾದ ಶ್ರೀಮತಿ ಮೇಬಲ್ ಡಿಸೋಜ ಹಾಗೂ ಶಿಕ್ಷಣಪ್ರೇಮಿ ಶ್ರೀಮತಿ ಗಿರಿಜಾ ಭಟ್ ಉಪಸ್ಥಿತರಿದ್ದರು.

ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಶಾರದಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀ ಪ್ರದೀಪ್ ಅವರು ನಿರೂಪಿಸಿದ್ದು, ಶ್ರೀಮತಿ ಕಸ್ತೂರಿ ಅವರು ವಂದನಾರ್ಪಣೆ ಸಲ್ಲಿಸಿದರು.

ಶಾಲೆಯ 180 ವಿದ್ಯಾರ್ಥಿಗಳಿಗೆ ತಲಾ ಎರಡು ಜತೆ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡಿದ ಎಲ್ಲಾ ದಾನಿಗಳು, ಸಹೃದಯರು ಹಾಗೂ ಪದವು ಫ್ರೆಂಡ್ಸ್ ಕ್ಲಬ್ ಸದಸ್ಯರಿಗೆ ಶಾಲಾ ಆಡಳಿತ ಮಂಡಳಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿತು.

Post a Comment

Previous Post Next Post