ತುಳುನಾಡಿನ ಇನ್ಸ್ಟಾಗ್ರಾಂ ಸೆನ್ಸೇಶನ್ ಆಗಿದ್ದ ಕಮಲಾ ದೊಡ್ಡ ನಿಧನ ! ; ಆ ನಿಷ್ಕಲ್ಮಶ ನಗು, ಮುದ್ದು ಮಾತುಗಳು ಇನ್ನು ನೆನಪು ಮಾತ್ರ

 

ಇನ್ಸ್ಟಾಗ್ರಾಂನಲ್ಲಿ ತನ್ನ ಮಾತು ಹಾಗೂ ನಡೆ ನುಡಿಯ ಮೂಲಕ ತುಳುನಾಡಿನ ಜನಮನವನ್ನು ಗೆದ್ದ ಕಮಲದೊಡ್ಡ ವಯೋ ಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಕಮಲ ದೊಡ್ಡ ಅವರು ತುಳು ಭಾಷೆಯಲ್ಲಿನ ಹಾಸ್ಯ, ದೈನಂದಿನ ಜೀವನದ ಅನುಭವಗಳು ಹಾಗೂ ತಮ್ಮ ವಿಶಿಷ್ಟ ಮಾತಿನ ಶೈಲಿಯಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. 

ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ಜನರೊಂದಿಗೆ ಬೆರೆತು ಮಾತನಾಡುತ್ತಿದ್ದ ಅವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದವು. ಪ್ರತಿ ವರ್ಷ ದೀಪಾವಳಿ ಸಂದರ್ಭ ಅವರ ಹೆಸರಿನಲ್ಲಿ ಪಟಾಕಿ ಸ್ಟಾಲ್ ಕೂಡ ಮೂಡುಬಿದಿರೆಯಲ್ಲಿ ತೆರೆಯಲಾಗುತ್ತಿತ್ತು.
Previous Post Next Post