ಮಣೇಲ್ ಗ್ರಾಮಡೊಂಜಿ ಚಿತ್ರಕೂಟೊ' | ಚಿತ್ರ ಕಲೆಯ ಮೂಲಕ ಗ್ರಾಮ ಚರಿತ್ರೆಯ ದಾಖಲೀಕರಣ ಶ್ಲಾಘನೀಯ : ಗಣೇಶ್ ಸೋಮಯಾಜಿ

ಮಂಗಳೂರು : ಚಿತ್ರ ಕಲೆಯ ಮೂಲಕ ಒಂದು ಊರಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ದಾಖಲೀಕರಣ ಮಾಡುವುದು ಶ್ಲಾಘನೀಯವಾಗಿದೆ ಎಂದು ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ 
ಅವರು ಹೇಳಿದರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಇಂಟಾಕ್ ಮಂಗಳೂರು ವಿಭಾಗ ಮತ್ತು ರಾಣಿ ಅಬ್ಬಕ್ಕ ಚಾವಡಿ ಮಣೆಲ್ ಸಂಯುಕ್ತ ಆಶ್ರಯದಲ್ಲಿ ಮಣೇಲ್ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾದ 
 'ಮಣೆಲ್ ಗ್ರಾಮೊಡೊಂಜಿ ಚಿತ್ರಕೂಟ' ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು. 

ಮಳಲಿ ಗ್ರಾಮ ಹಾಗೂ ಅಬ್ಬಕ್ಕರ ಚರಿತ್ರೆಯ ಕುರಿತು ಇತಿಹಾಸ ತಜ್ಞ ಮತ್ತು ನಿವೃತ್ತ ಉಪನ್ಯಾಸಕ ಡಾ. ಪುಂಡಿಕಾ ಗಣಪಯ್ಯ ಭಟ್ ಉಪನ್ಯಾಸ ನೀಡಿದರು. ಅಬ್ಬಕ್ಕ ದೇವಿಯರ ಕುರಿತು ಅಧ್ಯಯನ ಇನ್ನೂ ಪೂರ್ಣಗೊಂಡಿಲ್ಲ. ವೈಭವೀಕರಣಕ್ಕಿಂತ ವಸ್ತುನಿಷ್ಠ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕಿದ್ದು, ಅದಕ್ಕಾಗಿ ಮೂಲ ಆಕರಗಳತ್ತ ಮುಖ ಮಾಡಬೇಕು ಎಂದು ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. 
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಶುಭಕೋರಿ  ಮಾತನಾಡಿದರು.
 
ಎರಡು ದಿನಗಳ ಚಿತ್ರ ಕಾರ್ಯಗಾರದ ಆತಿಥ್ಯ ವಹಿಸಿರುವ ಕಟ್ಟೆಮಾರು ಮನೆತನದ ವಂಶಸ್ಥ ಪ್ರಶಾಂತ್ ಕುಮಾರ್ ಕಟ್ಟೆಮಾರ್, 
ದೇವಸ್ಥಾನದ ಟ್ರಸ್ಟಿ ವಾಮನ್ ನಾಯ್ಕ್ ಮಣೇಲ್ , ಮಣೇಲ್  ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ಇಂಟಾಕ್ ಮಂಗಳೂರು ವಿಭಾಗ ಸಂಚಾಲಕ ಸುಭಾಶ್ಚಂದ್ರ ಬಸು, ಪುರಂದರ ಕುಲಾಲ್ ಉಪಸ್ಥಿತರಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಸ್ವಾಗತಿಸಿದರು.ಕಾರ್ಯಕ್ರಮ ನಿರೂಪಿಸಿದ ನಿವೃತ್ತ ಉಪನ್ಯಾಸಕ ಅಕ್ಷಯ್ ಕುಮಾರ್ ಅವರು ಚಿತ್ರಕಲಾವಿದರಿಗೆ ಸ್ಥಳೀಯ ಸ್ಥಳಗಳ ಮಾಹಿತಿ ನೀಡಿದರು.

ಎರಡು ದಿನಗಳ ಚಿತ್ರ ಕಲಾ ಕಾರ್ಯಾಗಾರದಲ್ಲಿ 
ಕಲಾವಿದರಾದ ರಾಜೇಂದ್ರ ಕೇದಿಗೆ, ವಿಲ್ಸನ್ ಸೋಜಾ, ಸಂತೋಷ್ ಅಂದ್ರಾದೆ, ಜೀವನ್ ಸಾಲ್ಯಾನ್, ಹರೀಶ್ ಕೊಡಿಯಾಲಬೈಲು, ರೇಷ್ಮಾ ಎಸ್, ದೀರ್ಘಾ ಎಂ, ನಶ್ಮಿತಾ ಡಿ. ಎನ್, ಶ್ರೀಕಾಂತ್ ಎ, ಅಭಿಷೇಕ್ ತೀರ್ಥಹಳ್ಳಿ, ರೂಪೇಶ್ ಸುವರ್ಣ, ಎನ್. ಸಂದೀಪ್, ಲಿಖಿತ್ ಪೂಜಾರಿ ಪಾಲ್ಗೊಂಡಿದ್ದರು.

Post a Comment

Previous Post Next Post