ದಿ.ರೋ.ಶಾಂತರಾಮ್ ವಾಮಂಜೂರು ಸ್ಮಾರಕ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ: ಕಾವ್ಯ–ಶ್ರೀನಿಧಿ ತಂಡಕ್ಕೆ ಪ್ರಥಮ ಪ್ರಶಸ್ತಿ

ಮಂಗಳೂರು: ಜಿಲ್ಲಾ ರೋಟರಾಕ್ಟ್ ಸಂಸ್ಥೆ ಹಾಗೂ ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ, ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ. ರೋ. ಶಾಂತರಾಮ್ ವಾಮಂಜೂರು ಸ್ಮಾರಕ 20ನೇ ವಾರ್ಷಿಕ ರಾಜ್ಯಮಟ್ಟದ ಅಂತರ್‌ಕ್ಲಬ್ ರಸಪ್ರಶ್ನೆ ಸ್ಪರ್ಧಾಕೂಟವು ಇತ್ತೀಚೆಗೆ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿತು.

ಸಂಸ್ಥೆಯ ಸಭಾಪತಿ ರೋ.ಡಾ.ದೇವದಾಸ್ ರೈ ಅವರ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಮಣೇಲ್ ಶ್ರೀನಿವಾಸ ನಾಯಕ್ ಉದ್ಯಮ ಆಡಳಿತ ಕಾಲೇಜನ್ನು ಪ್ರತಿನಿಧಿಸಿದ ರೋ. ಕಾವ್ಯ ಮತ್ತು ರೋ. ಶ್ರೀನಿಧಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಮೈಸೂರು ರೋಟರಾಕ್ಟ್ ಕ್ಲಬ್‌ನ ರೋ. ಪ್ರಜ್ವಲ್ ದ್ವಿತೀಯ ಸ್ಥಾನವನ್ನು ಗಳಿಸಿದರು. ಸ್ಪರ್ಧೆ ರೋಮಾಂಚಕಾರಿ ಹಾಗೂ ಕುತೂಹಲಕಾರಿಯಾಗಿ ನಡೆಯಿತು.
ಖ್ಯಾತ ತುಳು ಚಲನಚಿತ್ರ ನಟ ಬೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ತಮ್ಮ ದಿವಂಗತ ಸಹೋದರ ರೋ. ಶಾಂತರಾಮ್ ವಾಮಂಜೂರು ಅವರ ಸ್ಮರಣಾರ್ಥ ಈ ಸ್ಪರ್ಧೆಯನ್ನು ವರ್ಷಂಪ್ರತಿ ಆಯೋಜಿಸುತ್ತಿರುವ ರೋಟರಾಕ್ಟ್ ಸಂಸ್ಥೆಯನ್ನು ಅಭಿನಂದಿಸಿದರು. 

ಅವರು ವಿಜೇತರಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಸಾಧನೆಯನ್ನು ಮೆಚ್ಚಿದರು.
ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೋ. ಭಾಸ್ಕರ ರೈ ಮಾತನಾಡಿ, ರೋಟರಾಕ್ಟ್ ಯುವ ಸದಸ್ಯರು ಸಂಸ್ಥೆಯ ಧ್ಯೇಯ, ನೀತಿ ಹಾಗೂ ಉದ್ದೇಶಗಳ ಕುರಿತು ಹೆಚ್ಚಿನ ಜ್ಞಾನವನ್ನು ಹೊಂದಿ, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ವೇದಿಕೆಯಲ್ಲಿ ರೋಟರಾಕ್ಟ್ ದಕ್ಷಿಣ ಏಷ್ಯ ಸಂಸ್ಥೆಯ ಅಧ್ಯಕ್ಷ ಸ್ಟೀವನ್ ಡೇರಿಲ್ ಡಿ'ಸೋಜ ಉಪಸ್ಥಿತರಿದ್ದರು. ರೋಟರಾಕ್ಟ್ ಮಂಗಳೂರು ಸಿಟಿ ಅಧ್ಯಕ್ಷ ರೋ. ಅಕ್ಷಯ್ ರೈ ಸ್ವಾಗತಿಸಿದರು. ಜಿಲ್ಲಾ ಮಟ್ಟದ ಏಳು ತಂಡಗಳು ಅಂತಿಮ ಸುತ್ತಿಗೆ ತಲುಪಿದ್ದವು. ಕಾರ್ಯಕ್ರಮವನ್ನು

Post a Comment

Previous Post Next Post