ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿಗಳ ಆಗಮನ: ತೋಳ 'ಗೀತಾ'ಳಿಗೆ ಏಳು ಮರಿಗಳ ಜನನ!

ಮಂಗಳೂರು ಸಮೀಪದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 2026ರ ಜನವರಿ ತಿಂಗಳಲ್ಲಿ ಭಾರತೀಯ ತೋಳ ‘ಗೀತಾ’ ಒಟ್ಟು ಏಳು ಮರಿಗಳಿಗೆ (ನಾಲ್ಕು ಗಂಡು, ಮೂರು ಹೆಣ್ಣು) ಜನ್ಮ ನೀಡಿದೆ. 

ಮೂರು ವರ್ಷಗಳಿಂದ ಇಲ್ಲಿ ಭಾರತೀಯ ತೋಳಗಳನ್ನು ಸಾಕಲಾಗುತ್ತಿದ್ದು, ಇದು ಉದ್ಯಾನವನದಲ್ಲಿ ನಡೆದ ಮೊದಲ ಯಶಸ್ವಿ ಸಂತಾನೋತ್ಪತ್ತಿಯಾಗಿದ್ದು, ಸಂರಕ್ಷಣೆ ಮತ್ತು ಸೆರೆ ಸಂತಾನೋತ್ಪತ್ತಿ ಪ್ರಯತ್ನಗಳಿಗೆ ಮಹತ್ವದ ಮೈಲಿಗಲ್ಲಾಗಿದೆ.

ತಾಯಿ ತೋಳ ಮತ್ತು ಏಳು ಮರಿಗಳೂ ಆರೋಗ್ಯವಾಗಿದ್ದು, ಪಶುವೈದ್ಯರು ಮತ್ತು ಪ್ರಾಣಿ ಪಾಲಕರು ಅವುಗಳನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಈಗ ಮರಿಗಳು ಚುರುಕಾಗಿ ಓಡಾಡುತ್ತಿದ್ದು, ಸಂದರ್ಶಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
Previous Post Next Post