ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯ ಮೂಲಕ ಭರ್ಜರಿ ಆದಾಯ ಲಭಿಸಿದೆ. ನಿರೀಕ್ಷೆಯಂತೆ ಹೊಸ ವರ್ಷದ ದಿನಗಳಲ್ಲಿ ಮದ್ಯದ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಲಿಕ್ಕರ್ ಹಾಗೂ ಬಿಯರ್ ಮಾರಾಟವಾಗಿದೆ.
ಕಳೆದ 2024ರ ಡಿಸೆಂಬರ್ 29, 30 ಮತ್ತು 31ರ ಮೂರು ದಿನಗಳಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.25 ಲಕ್ಷ ಬಾಕ್ಸ್ ಹಾಗೂ ಬಿಯರ್ 5.03 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಈ ಅವಧಿಯಲ್ಲಿ ಐಎಂಎಲ್ ಮತ್ತು ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆ ಒಟ್ಟು 420.77 ಕೋಟಿ ರೂ. ಆದಾಯ ಗಳಿಸಿತ್ತು.
ಇದಕ್ಕೆ ಹೋಲಿಸಿದರೆ, 2025ರ ಡಿಸೆಂಬರ್ 29, 30 ಮತ್ತು 31ರ ಮೂರು ದಿನಗಳಲ್ಲಿ ಐಎಂಎಲ್ ಮಾರಾಟ 9.84 ಲಕ್ಷ ಬಾಕ್ಸ್‌ಗೆ ಏರಿಕೆಯಾಗಿದ್ದು, ಕಳೆದ ವರ್ಷದ 1.59 ಲಕ್ಷ ಬಾಕ್ಸ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಇದೇ ಅವಧಿಯಲ್ಲಿ ಬಿಯರ್ ಮಾರಾಟವೂ 6.64 ಲಕ್ಷ ಬಾಕ್ಸ್‌ಗೆ ತಲುಪಿದ್ದು, ಇದು ಕಳೆದ ವರ್ಷಕ್ಕಿಂತ 1.61 ಲಕ್ಷ ಬಾಕ್ಸ್ ಅಧಿಕವಾಗಿದೆ.
ಈ ವರ್ಷದ ಐಎಂಎಲ್ ಮತ್ತು ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆಗೆ ಒಟ್ಟು 587.51 ಕೋಟಿ ರೂ. ಆದಾಯ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 166.74 ಕೋಟಿ ರೂ. ಹೆಚ್ಚುವರಿ ಆದಾಯ ದಾಖಲಾಗಿದೆ. ಇದರಿಂದ ಹೊಸ ವರ್ಷದ ಸಂಭ್ರಮ ರಾಜ್ಯ ಸರ್ಕಾರದ ಖಜಾನೆಗೆ ದೊಡ್ಡ ಲಾಭ ತಂದುಕೊಟ್ಟಿದೆ.
Post a Comment