Top News

ಜ.18ರಂದು ಮೂಡುಶೆಡ್ಡೆಯಲ್ಲಿ ಹಿಂದೂ ಸಂಗಮ‌ ಕಾರ್ಯಕ್ರಮ ; ಆಮಂತ್ರಣ ಪತ್ರ ಬಿಡುಗಡೆ

ಮಂಗಳೂರು : ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಮೂಡುಶೆಡ್ಡೆಯಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮೂಡುಶೆಡ್ಡೆ ಶಿವಶಕ್ತಿ ಭಜನಾ ಮಂದಿರದ ಸಭಾಂಗಣದಲ್ಲಿ ರಾಮಚಂದ್ರ ಉಡುಪರ ಅಧ್ಯಕ್ಷತೆಯಲ್ಲಿ ಗುರುವಾರ ನೆರವೇರಿತು.
 
ಹಿಂದೂ ಸಂಗಮ ಕಾರ್ಯಕ್ರಮ ಜ.18ರಂದು ಸಂಜೆ 4ಕ್ಕೆ ಮೂಡುಶೆಡ್ಡೆ ಪಂಚಾಯತ್ ಬಳಿ ಮೈದಾನದಲ್ಲಿ ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ದೈವಸ್ಥಾನ, ಮಂದಿರಗಳ ಧಾರ್ಮಿಕ ಮುಖಂಡರು ಆದಿಕ್ಷೇತ್ರ ಜಾರದ ಗಡಿಪ್ರಧಾನರಾದ ಜತ್ತಿ ಪೂಜಾರಿ ಜಾರ, ಒಂದುವರೆ ಸಾನ ವೇಣುಗೋಪಾಲ ಅರಸರು, ಪಡುಶೆಡ್ಡೆ ಪ್ರಕಾಶ್ ಗಟ್ಟಿ, ಶ್ರೀಧರ ಆಚಾರ್ಯ, ಕಿರಣ್ ಶೆಟ್ಟಿ ಹೊಸಲಕ್ಕೆ, ರಮೇಶ್ ಮಡಿವಾಳ, ಯು.ಬಿ. ರಾಮಕೃಷ್ಣ ಕಲ್ಲುಗುಡ್ಡೆ, ತಂಕಲಾಜೆ ಚಂದ್ರಶೇಖರ್, ಮೋಹನ್ ನಾಯಕ್, ಹರಿಪ್ರಸಾದ್ ಶೆಟ್ಟಿ, ಉಮೇಶ್ ಜೆ., ರಮನಾಥ ಅತ್ತಾರ್, ಮಹಾದೇವಿ ವಾರ್ಡ್, ಕಿರಣ್ ನಾಯಕ್ ಎದುರುಪದವು, ಚಂದ್ರಶೇಖರ್ ಎದುರುಪದವು ಉಪಸ್ಥಿತರಿದ್ದು, ಶಕ್ತಿನಗರ ಸಂಘಚಾಲಕ ಜಯರಾಮ್ ಮೂಡುಶೆಡ್ಡೆ ಹಿಂದೂ ಸಂಗಮದ ಉದ್ದೇಶವನ್ನು ವಿವರಿಸಿದರು. ನವೀನ್ ಮೂಡುಶೆಡ್ಡೆ ಸ್ವಾಗತಿಸಿದರು. ಹರೀಶ್ ಕೆ.ನಿರೂಪಿಸಿದರು.

Post a Comment

Previous Post Next Post