ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ಜ.10ರಂದು ಕಲಾಸಾಧನದ 'ಸ್ವರಾನುಬಂಧ' ಸಂಗೀತ ಉತ್ಸವ

ಮಂಗಳೂರು : ಕಲಾಸಾಧನದ ವತಿಯಿಂದ ಸ್ವರಾನುಬಂಧ ಸಂಗೀತ ಉತ್ಸವ ಕಾರ್ಯಕ್ರಮ ಜ.10ರಂದು ಮಧ್ಯಾಹ್ನ 3ಕ್ಕೆ ನಗರದ ನವಭಾರತ್ ಸರ್ಕಲ್‌ ಸಮೀಪದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಕಲಾಸಾಧನದ ವಿಭಾ ಎಸ್‌. ನಾಯಕ್ ತಿಳಿಸಿದರು.

ಅವರು ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾತ್ರಿ 8 ಗಂಟೆಯ ವರೆಗೆ ಸ್ವರಾನುಬಂಧ ಸಂಗೀತ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಕಲಾಸಾಧನದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಬಳಿಕ ವಿಭಾ ಎಸ್. ನಾಯಕ್ ಮಂಗಳೂರು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬಲಾದಲ್ಲಿ ವಿಶ್ಲೇಶ್ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ಮೇಧಾ ಜಿ. ಭಟ್ ಸಾಥ್ ನೀಡಲಿದ್ದಾರೆ.

ಉಸ್ತಾದ್ ರಫೀಕ್ ಖಾನ್ ಮತ್ತು ಪಿ. ಸಮೀರ್ ರಾವ್ ಅವರಿಂದ ಸಿತಾರ್‌ ಮತ್ತು ಕೊಳಲು ಜುಗಲ್ಬಂದಿ, ಪಂ.ರಾಜೇಂದ್ರ ನಾಕೋಡ್ ಅವರೊಂದಿಗೆ ನಡೆಯಲಿದೆ.

ಯುವ ಕಲಾವಿದರಲ್ಲಿ ಸಂಗೀತದ ಕುರಿತು ಆಸಕ್ತಿ ಹೆಚ್ಚಿಸಲು ಹಾಗೂ ಅವರಿಗೆ ವೇದಿಕೆ ಕಲ್ಪಿಸಲು ಪ್ರತೀ ವರ್ಷ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ,ಇದರೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಾರತೀಯ ಹಿಂದುಸ್ಥಾನಿ ಸಂಗೀತ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಪ್ರತೀ ವರ್ಷ ಆಯೋಜಿಸಲಾಗುತ್ತಿದೆ. ಸಂಗೀತ ಕಾರ್ಯಕ್ರಮ ದಲ್ಲಿ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು.

ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್‌ ನಾಯಕ್ ಇಂದಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Post a Comment

Previous Post Next Post