ರಂಗ ಸ್ವರೂಪಕ್ಕೆ ರಾಜ್ಯೋತ್ಸವ ಪ್ರಶಸ್ತಿ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ: ‘ರಂಗಾಂತರಂಗ’ ಸಂಗೀತ–ಸಾಂಸ್ಕೃತಿಕ ವೈಭವ ಕಾರ್ಯಕ್ರಮ

ಮಂಗಳೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಮಂಗಳೂರು ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಕುಂಜತ್ತಬೈಲ್ ಆಸರೆ ಮನೆಯಲ್ಲಿ ‘ರಂಗಾಂತರಂಗ’ ಸ್ವರ–ಕರಗಳ ಸಮ್ಮಿಳನ ಹಾಗೂ ಕಲಾವಿದ ನಾದ ಮಣಿ ನಾಲ್ಕೂರು ಅವರಿಂದ ವಿನೂತನ ತತ್ವ–ಭಾವ ಗಾನಯಾನ ‘ಕತ್ತಲ ಹಾಡು’ ಕಾರ್ಯಕ್ರಮ ಜರುಗಿತು.

ಸ್ವರೂಪ ಅಧ್ಯಯನ ಸಮೂಹ ಮಂಗಳೂರು ನಿರ್ದೇಶಕ ಗೋಪಾಡ್ಕರ್, ಸಾಹಿತಿ ಡಾ. ವಸಂತ್ ಕುಮಾರ್ ಪೆರ್ಲಾ, ಕಲಾವಿದ ದಿನೇಶ್ ಹೊಳ್ಳ, ಶೈಕ್ಷಣಿಕ ಸಲಹೆಗಾರ ಮೊಹಮ್ಮದ್ ರಫೀಕ್ ಅವರು ಮಾತನಾಡಿ ರಂಗ ಸ್ವರೂಪ ತಂಡದ ಸಾಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ಸ್ನೇಹಿ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹುಸೈನ್ ರಿಯಾಝ್, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು, ಹನೀಷಾ, ಅರವಿಂದ ಕುಡ್ಲ, ರೈಹಾನ್, ವೈಷ್ಣವಿ, ಆದಂ ಖಾನ್, ಬದ್ರುದ್ದೀನ್ ಕೂಳೂರು, ಸುಮನಾ ರೆಬೆಲ್ಲೋ, ಸಂಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಂಡದ ಸ್ಥಾಪಕರಾದ ಗೋಪಾಡ್ಕರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗ ಸ್ವರೂಪ ತಂಡದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು. ಕಲಾವಿದ ಝುಬೇರ್ ಖಾನ್ ಕುಡ್ಲ ವಂದಿಸಿದರು. ಶಿಕ್ಷಕ ಪ್ರೇಂನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post