ಮಾಹಿತಿಯ ಪ್ರಕಾರ, ಅಂಬಿಕನಗರದ ರಾಜೇಶ್ ಎಂಬವರು ಕುಟುಂಬ ಕಲಹದ ಹಿನ್ನೆಲೆ ಪಣಂಬೂರು ಬೀಚ್‌ನಲ್ಲಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜನರು ಹೆಚ್ಚಿದ್ದು ಜೀವ ಕಳೆದುಕೊಳ್ಳದಂತೆ ರಕ್ಷಿಸಲಾಗಿತ್ತು.
ನಂತರ ರಾಜೇಶ್ ನೇಣು ಹಾಕಿ ಜೀವ ಕೊಡುವ ಪ್ರಯತ್ನ ಮಾಡಿದ್ದ ವೇಳೆ, ಠಾಣೆಯ ಗುಪ್ತ ವಾರ್ತೆ ಸಿಬ್ಬಂದಿ ಮತ್ತು ಕ್ರೈಂ ವಿಭಾಗದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾಗಿಲು ಮುರಿದು ಅವರನ್ನು ರಕ್ಷಿಸಿದ್ದಾರೆ.
ಪೊಲೀಸರ ಸಮಯೋಚಿತ ಕಾರ್ಯದಿಂದ ತಂದೆ ಮತ್ತು ಮಗಳ ಜೀವ ಉಳಿದಿದ್ದು, ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಬಳಿಕ ಅವರನ್ನು ಕಾವೂರು ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
Post a Comment