ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.1.50 ಲಕ್ಷ ರೂ. ಸಹಾಯಧನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಧರ್ಮಸ್ಥಳ ಕ್ಷೇತ್ರದಿಂದ ಚಾಮುಂಡೇಶ್ವರಿ ದೇವಸ್ಥಾನ (ಎದುರುಪದವು ಮೂಡುಶೆಡ್ಡೆ) ಜೀರ್ಣೋದ್ಧಾರಕ್ಕಾಗಿ ರೂ. ಒಂದು ಲಕ್ಷ ಐವತ್ತು ಸಾವಿರ ಅನುದಾನ ನೀಡಲಾಗಿದೆ.

ಈ ಸಹಾಯಧನದ ಚೆಕ್ ಅನ್ನು ತಾಲೂಕಿನ ಮಾನ್ಯ ಯೋಜನಾಧಿಕಾರಿಯಾದ ಗಿರೀಶ್, ವಲಯದ ಅಧ್ಯಕ್ಷ ಉಮೇಶ್ ಆಚಾರ್ಯ ಹಾಗೂ ಮೇಲ್ವಿಚಾರಕಿ ಕುಮಾರಿ ಪವಿತ್ರ ಇವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ್ ಹಾಗೂ ಪದಾಧಿಕಾರಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಜೆ., ಪಂಚಾಯತ್ ಸದಸ್ಯ ಸುನಿಲ್ ಕೆ., ಸೇವಾ ಪ್ರತಿನಿಧಿ ಶಿವಾನಿ, ಒಕ್ಕೂಟ ಅಧ್ಯಕ್ಷರು ಜಯಂತಿ ಮತ್ತು ಮೋಹಿನಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Post a Comment

Previous Post Next Post