ಮೂಲ್ಕಿ: ಖ್ಯಾತ ಪ್ರಸಂಗಕರ್ತ, ಯಕ್ಷಗಾನ ಗುರು ಹಾಗೂ ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಗಣೇಶ್ ಕೊಲಕಾಡಿ (53) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಗಣೇಶ್ ಕೊಲಕಾಡಿ ಅವರು ಶ್ರೇಷ್ಠ ಯಕ್ಷಗಾನ ಪ್ರಸಂಗಕರ್ತರಾಗಿ, ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಖ್ಯಾತಿಗಿಳಿದವರು. 2022ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದರು.
ಕ್ಲಿಷ್ಟ ಮತ್ತು ಸಂಕೀರ್ಣ ಛಂದಸ್ಸಿನಲ್ಲಿಯೂ ಲೀಲಾಜಾಲವಾಗಿ ಪದ್ಯರಚನೆ ಮಾಡುವ ಪ್ರಾಜ್ಞಗುರುವೆಂದು ಗಣೇಶ್ ಕೊಲಕಾಡಿಯವರನ್ನು ವಿದ್ವಾಂಸರೇ ಕೊಂಡಾಡುತ್ತಿದ್ದರು. ಸುಮಾರು 18 ವರ್ಷಗಳ ಹಿಂದೆ ಕಾರ್ಯ ನಿಮಿತ್ತ ಮುಂಬೈಗೆ ತೆರಳಿದ್ದಾಗ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಶಾರೀರಿಕವಾಗಿ ಅಸಹಾಯಕರಾಗಿದ್ದರು. ಆದರೂ ಹಾಸಿಗೆಯಲ್ಲಿಯೇ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದ ಅವರು ನಿಜವಾದ ಯಕ್ಷಗಾನ ಗುರುಗಳಾಗಿದ್ದರು.
Post a Comment