ಇನ್ಸ್ಟಾಗ್ರಾಮ್‌ ಮೂಲಕ ಪೂಜೆ ಮಾಡಿಸಿ ಸಮಸ್ಯೆ ಪರಿಹಾರವೆಂದು ನಂಬಿಸಿ ₹24.78 ಲಕ್ಷ ಸೈಬರ್‌ ವಂಚನೆ ; ಆರೋಪಿ ಬಂಧನ

ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತತ್‌ಕ್ಷಣ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಂದ ಸುಮಾರು ₹24,78,274/- ಮೊತ್ತದ ಸೈಬರ್‌ ವಂಚನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87/2025, U/S 66(D) IT Act ಮತ್ತು 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದ ತನಿಖೆಯ ವೇಳೆ ದಿನಾಂಕ: 04-11-2025 ರಂದು ಆರೋಪಿ ವಾಸುದೇವ ಆರ್‌ (32), ವಿಳಾಸ: ಗೋಕುಲ 1st ಹಂತ, ಯಶವಂತಪುರ, ಬೆಂಗಳೂರು (ಹಾಲಿ ವಾಸ: ಶ್ರೀನಿವಾಸನಗರ, ಸುಂಕದಕಟ್ಟೆ, ಬೆಂಗಳೂರು) ಎಂಬಾತನನ್ನು ಬಂಧಿಸಲಾಗಿದೆ.

ಆತನಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್‌ ಫೋನ್‌ಗಳು ಹಾಗೂ ₹20,300/- ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ₹1,60,300/- ಆಗಿರುತ್ತದೆ.

ಆರೋಪಿಯನ್ನು 05-11-2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Post a Comment

Previous Post Next Post