ಚಿಕ್ಕಮಗಳೂರು: ಪ್ರಸಿದ್ಧ ದೇವಿರಮ್ಮ ಬೆಟ್ಟದ ಜಾತ್ರೆಯ ಸಂಭ್ರಮದ ನಡುವೆ ದುರಂತ ಸಂಭವಿಸಿದೆ. ಬೆಟ್ಟ ಹತ್ತುವ ವೇಳೆ ಏಕಾಏಕಿ ಹೃದಯಾಘಾತಕ್ಕೊಳಗಾದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ನಿವಾಸಿ ಲಕ್ಷ್ಮಣ್ (32) ಮೃತಪಟ್ಟಿದ್ದಾರೆ.
ದೇವಿರಮ್ಮ ಬೆಟ್ಟದ ಜಾತ್ರೆಯ ಎರಡನೇ ದಿನದಂದು ಈ ಘಟನೆ ನಡೆದಿದೆ. ಬೆಟ್ಟ ಏರುತ್ತಿದ್ದ ವೇಳೆ ಲಕ್ಷ್ಮಣ್ ಅವರು ಏಕಾಏಕಿ ಕುಸಿದು ಬಿದ್ದಿದ್ದು, ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಟ್ಟ ಹತ್ತಲು ನಿಗದಿಪಡಿಸಲಾಗಿದ್ದ ಕೊನೆಯ ದಿನದಂದೇ ಈ ದುರ್ಘಟನೆ ಸಂಭವಿಸಿರುವುದು ಭಕ್ತರಲ್ಲಿ ಆಘಾತ ಮೂಡಿಸಿದೆ. ಜಾತ್ರೆಯ ಸಂಭ್ರಮದ ನಡುವೆ ಯುವಕನ ಸಾವಿನಿಂದ ಸ್ಥಳೀಯರು ಹಾಗೂ ಭಕ್ತರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
Post a Comment