ಮಂಗಳೂರು | ಶ್ರೀ ಷಣ್ಮುಖ ಕ್ರಿಯೇಷನ್‌ ಕಡಂದಲೆ ಅರ್ಪಿಸಿದ ‘ಕೃಷ್ಣಾರ್ಪಣಂ’ ಕನ್ನಡ ಭಕ್ತಿಗೀತೆ ಮಂಗಳೂರಿನ ಉರ್ವಿ ಶ್ರೀ ಕೃಷ್ಣ ಮಠದಲ್ಲಿ ಲೋಕಾರ್ಪಣೆ


ಮಂಗಳೂರು: ಶ್ರೀ ಷಣ್ಮುಖ ಕ್ರಿಯೇಷನ್ ಕಡಂದಲೆ ಅರ್ಪಿಸಿದ ‘ಕೃಷ್ಣಾರ್ಪಣಂ’ ಎಂಬ ನೂತನ ಕನ್ನಡ ಭಕ್ತಿಗೀತೆಯ ಬಿಡುಗಡೆ ಕಾರ್ಯಕ್ರಮ ಬುಧವಾರ ಮಣ್ಣಗುಡ್ಡೆಯ ಉರ್ವಿ ಶ್ರೀ ಕೃಷ್ಣ ಮಠದಲ್ಲಿ ನಡೆಯಿತು

ಕ್ಷೇತ್ರದ ಅರ್ಚಕರಾದ ಚಂದ್ರಶೇಖರ ಭಟ್ ಗೀತೆ ಲೋಕಾರ್ಪಣೆಗೊಳಿಸಿದರು. 
ಗೀತೆಗೆ ಸಾಹಿತ್ಯ ಹಾಗೂ ರಾಗಸಂಯೋಜಿಸಿದ ಆರ್.ಪ್ರದೀಪ್ ಕುಮಾರ್ ಕಾಪು, ಗಾಯನ ಹಾಗೂ ಸಂಗೀತ ಸಂಯೋಜಿಸಿದ ಕೆ.ಪಿ. ಮಿಲನ್ ಕುಮಾರ್ ಸಚ್ಚೇರಿಪೇಟೆ, ಛಾಯಾಗ್ರಹಣ ನಿರ್ವಹಿಸಿದ ಗಣೇಶ್ ಆಚಾರ್ಯ ಅದ್ಯಪಾಡಿ, ಸಂಕಲನ ಹಾಗೂ ಪ್ರಚಾರಕಲೆ ನಿರ್ವಹಿಸಿದ ಪ್ರಸಾದ್ ಆಚಾರ್ಯ ಕೊಳಂಬೆ ಹಾಗೂ ಉಜ್ವಲ್ ಉಪಸ್ಥಿತರಿದ್ದರು.

ಭಕ್ತಿ, ಸಂಗೀತ ಮತ್ತು ಮನಮೋಹಕ ದೃಶ್ಯ ಸಂಯೋಜನೆಯೊಂದಿಗೆ ಮೂಡಿಬಂದಿರುವ ಈ ಗೀತೆಯು ಶ್ರೀಕೃಷ್ಣನಿಗೆ ಅರ್ಪಣೆಯ ರೂಪದಲ್ಲಿ ಪ್ರೇಕ್ಷಕರನ್ನು ತಲುಪಲಿದೆ.

‘ಕೃಷ್ಣಾರ್ಪಣಂ’ ಭಕ್ತಿಗೀತೆಯ ನಿರ್ಮಾಣ ಹಾಗೂ ನಿರ್ದೇಶನದ ಹೊಣೆಗಾರಿಕೆಯನ್ನು ಸುಮಂತ್ ಪೂಜಾರಿ ಕಡಂದಲೆ ವಹಿಸಿಕೊಂಡಿದ್ದಾರೆ. ನೃತ್ಯ ನಿರ್ದೇಶನವನ್ನು ಕೃಷ್ಣಾಪುರದ ದಿಗ್ವಿಜಯ್ ಡ್ಯಾನ್ಸರ್ಸ್‌ನ ಶ್ರಾವ್ಯ ಆಚಾರ್ಯ ಮಾಡಿದ್ದಾರೆ. ಗೀತೆಯ ದೃಶ್ಯಗಳಲ್ಲಿ ಪ್ರತಿಮಾ ಶೆಟ್ಟಿ ಮತ್ತು ಡಿಯಾನ್ ಎಸ್. ಶೆಟ್ಟಿ ಅಭಿನಯಿಸಿದ್ದಾರೆ.

ಭಕ್ತಿಗೀತೆಯ ಸಂಗೀತ ಸಂಯೋಜನೆಗೆ ಪೂರಕವಾಗಿ ಹಲವು ಕಲಾವಿದರು ಕೈಜೋಡಿಸಿದ್ದಾರೆ. ಮುಲ್ಕಿಯ ಸಪ್ತಸ್ವರ ಸ್ಟುಡಿಯೋದಲ್ಲಿ ಕಾರ್ತಿಕ್ ಮುಲ್ಕಿ ಧ್ವನಿಮುದ್ರಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದರ್ಶನ್ ಆಚಾರ್ಯ ಮೂಡುಬಿದಿರೆ ಕೊಳಲು ವಾದನದ ಮೂಲಕ ಸಂಗೀತಕ್ಕೆ ವಿಶೇಷ ಮೆರುಗು ನೀಡಿದ್ದಾರೆ. ತಬಲಾ ವಾದನವನ್ನು ದರ್ಶನ್ ದೇವಾಡಿಗ ಮುಲ್ಕಿ ನಿರ್ವಹಿಸಿದ್ದಾರೆ. ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ಕಾರ್ಯವನ್ನು ಜೋಸಿನ್ ಆಶಿತ್ ಡಿಸೋಜಾ ಮಾಡಿದ್ದಾರೆ. ಉಡುಪಿಯ ಪ್ರಜ್ವಲ್ ಸುವರ್ಣ ಅವರು ವಿಶೇಷ ಸಹಕಾರ ನೀಡಿದ್ದಾರೆ.

ಸಾಂಪ್ರದಾಯಿಕ ಭಕ್ತಿಯ ಭಾವನೆಗಳನ್ನು ಆಧುನಿಕ ಸಂಗೀತ ಮತ್ತು ದೃಶ್ಯ ಮಾಧ್ಯಮದೊಂದಿಗೆ ಸಂಯೋಜಿಸುವ ಪ್ರಯತ್ನವಾಗಿ ‘ಕೃಷ್ಣಾರ್ಪಣಂ’ ಮೂಡಿಬಂದಿದೆ.

‘ಕೃಷ್ಣಾರ್ಪಣಂ’ K P Milan Kumar ಹಾಗೂ Momentavibeofficial ಯೂಟ್ಯೂಬ್ ಚಾನೆಲ್‌ಗಳಲ್ಲಿ ಗೀತೆಯನ್ನು ವೀಕ್ಷಿಸಬಹುದಾಗಿದೆ.

Post a Comment

Previous Post Next Post