ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಮೆಟ್ರೊ ವತಿಯಿಂದ ನಗರದ ಬಿಜೈ ಕಾಪಿಕಾಡ್ ಅಂಗನವಾಡಿಯ ಮಕ್ಕಳಿಗೆ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಸಮವಸ್ತ್ರಗಳನ್ನು ಅಂಗನವಾಡಿ ಶಿಕ್ಷಕಿ ನಂದಾ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಅಧ್ಯಕ್ಷ ಶ್ಯಾಮ್ ಪ್ರಕಾಶ್, ಸಹಾಯಕ ಗವರ್ನರ್ ಡಾ. ಅರವಿಂದ್, ಸದಸ್ಯರಾದ ಸ್ವಾತಿ ಪ್ರಸಾದ್, ಚಂದ್ರಶೇಖರ್, ಡಾ.ರಿತೇಶ್ ಪ್ರಭು ಹಾಗೂ ದಯಾನಂದ ಪ್ರಭು, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಬಿಜೈ ಕಾಪಿಕಾಡ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ ಎಸ್. ಹಾಗೂ ಅಂಗನವಾಡಿ ಸಹಾಯಕಿ ಪ್ರಭಾ ಉಪಸ್ಥಿತರಿದ್ದರು.
Post a Comment