ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್ ಶಾಕೀರ್ ಸಹಿತ ಇಬ್ಬರ ಬಂಧನ

ಉಳ್ಳಾಲ : ತಾಲೂಕಿನ ತೊಕ್ಕೊಟ್ಟಿನ ವಿನಮ್ರ ಬಾರ್ ಮುಂಭಾಗ ತಲವಾರು ತೋರಿಸಿ ದಾಂಧಲೆ ನಡೆಸಿದ ಹಿನ್ನಲೆಯಲ್ಲಿ ಪೊಲೀಸರು ರೌಡಿ ಶೀಟರ್ ಮಹಮ್ಮದ್ ಶಾಕೀರ್ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.

ರಾತ್ರಿಯ ವೇಳೆ ತೊಕ್ಕೊಟ್ಟಿನ ಬಾರ್ ಮುಂಭಾಗಕ್ಕೆ ಆಟೋ ರಿಕ್ಷಾದಲ್ಲಿ ಬಂದ ಶಾರೀಕ್ ಮಾರಕಾಯುಧವನ್ನು ತೋರಿಸಿ ಬಾರ್ ಬಂದ್ ಮಾಡುವಂತೆ ಆವಾಝ್ ಹಾಕಿದ್ದು, ಜಾಗದಲ್ಲಿದ್ದ ಜನರು ಆತಂಕದಿಂದ ಚೆಲ್ಲಾಪಿಲ್ಲಿಯಾಗಿ ಓಡಿ ಹೋದ ವಿಡಿಯೋ ವೈರಲ್ ಆಗಿತ್ತು. 

ಈ ಹಿನ್ನಲೆಯಲ್ಲಿ ರೌಡಿಶೀಟರ್ ಉಳ್ಳಾಲ ನಿವಾಸಿ ಮೊಹಮ್ಮದ್ ಶಾರೀಕ್(31) ಹಾಗೂ ಆಟೋ ಚಾಲಕ ಉಳ್ಳಾಲ ಮಂಚಿಲ ನಿವಾಸಿ ಅಶ್ಫಕ್ ಎನ್ನುವವನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ

Post a Comment

Previous Post Next Post