ಆಟಿ ಅಮಾವಾಸ್ಯೆ: ಸುವರ್ಣ ಕ್ಲಿನಿಕ್‌ನಲ್ಲಿ ಉಚಿತ ಆಟಿ ಕಷಾಯ ವಿತರಣೆ

ಮಂಗಳೂರು: ಆಟಿ ಅಮಾವಾಸ್ಯೆ ಪ್ರಯುಕ್ತ ನಗರದ ಅಳಕೆ ಸ್ಯಾನ್‌ಫ್ಲೋ ಕಾಂಪ್ಲೆಕ್ಸ್‌ನಲ್ಲಿರುವ ಸುವರ್ಣ ಕ್ಲಿನಿಕ್, ಪ್ರಕೃತಿ ಆಯುರ್ವೇದ ಪಂಚಕರ್ಮ ಸೆಂಟರ್ ವತಿಯಿಂದ ಬುಧವಾರ ಉಚಿತವಾಗಿ ಆಟಿ ಕಷಾಯ ವಿತರಿಸಲಾಯಿತು.

ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತುಳುವರ ವಿಶಿಷ್ಟ ಆಟಿ ಆಚರಣೆ ಹಾಗೂ ಆಟಿ ಕಷಾಯದ ಮಹತ್ವವನ್ನು ವಿವರಿಸಿದರು. ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಶುಭ ಹಾರೈಸಿದರು.

ಸಂಸ್ಥೆಯ ಗುಲಾಬಿ ಸುವರ್ಣ, ಹರಿಪ್ರಸಾದ್ ಚಾಲಿಯಾನ್, ಯಶವಂತ ಅಮೀನ್, ಸರಿತಾ, ರವಿ ದೇವಾಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುವರ್ಣ ಕ್ಲಿನಿಕ್‌ನ ಡಾ. ಹರಿಪ್ರಸಾದ್ ಸುವರ್ಣ ಸ್ವಾಗತಿಸಿದರು.

Post a Comment

Previous Post Next Post