ಮುಹಮ್ಮದ್ ನಬಿ 1501ನೇ ಮೀಲಾದುನ್ನಬಿ ಪ್ರಯುಕ್ತ ಬಜಾಲ್ - ನಂತೂರಿನಲ್ಲಿ ಸಂಭ್ರಮದ ಮೀಲಾದ್ ರ‌್ಯಾಲಿ

ಮಂಗಳೂರು: ಮುಹಮ್ಮದ್ ನಬಿ ಅವರ 1501ನೇ ಮೀಲಾದುನ್ನಬಿ ಪ್ರಯುಕ್ತ ಬಜಾಲ್-ನಂತೂರು, ಫೈಸಲ್ ನಗರ ಹಾಗೂ ಶಾಂತಿನಗರ ವ್ಯಾಪ್ತಿಯಲ್ಲಿ ಮೀಲಾದ್ ರ್ಯಾಲಿ ನಡೆಯಿತು.

ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ, ಫೈಸಲ್ ನಗರದ ನಮಾಉಲ್ ಇಸ್ಲಾಂ ಮದ್ರಸ ಹಾಗೂ ಶಾಂತಿನಗರ ತರ್ಬಿಯತುಲ್ ಇಸ್ಲಾಂ ಕಮಿಟಿ ಜಂಟಿ ಆಶ್ರಯದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. 

ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ನಾಸಿರ್ ಸಅದಿ ಅವರು ದುಆ ನೆರವೇರಿಸಿದರು. ಬಳಿಕ ಕಾರ್ಯಕ್ರಮದ ಅಧ್ಯಕ್ಷ ಅಬ್ದುಲ್ ರವೂಫ್ ಧ್ವಜಾರೋಹಣ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ಸದರ್ ಉಸ್ತಾದ್ ಅಬ್ದುಲ್ ಹಕೀಂ ಮದನಿ, ಗೌಸಿಯಾ ಜುಮಾ ಮಸೀದಿಯ ಖತೀಬ್ ಇಕ್ಬಾಲ್ ನಿಝಾಮಿ, ತರ್ಬಿಯತುಲ್ ಇಸ್ಲಾಂ ಕಮಿಟಿಯ ಇಮಾಮ್ ಮಿಖ್ದಾದ್ ಹಾಶಿಮಿ, ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ, ಉಪಾಧ್ಯಕ್ಷ ಅಶ್ರಫ್ ಕರಿಬೊಟ್ಪು, ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಾಜಿ ಕಾರ್ಯದರ್ಶಿ ಪೊಡಿಯಾಕ, ಕೋಶಾಧಿಕಾರಿ ನಝೀರ್ ಪಾಂಡೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗೌಸಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಬದ್ರಿಯಾ ಜುಮಾ ಮಸೀದಿಯ ಜೊತೆ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕೆಳಗಿನಮನೆ, ಸದಸ್ಯರಾದ ಇಕ್ಬಾಲ್ ಅಹ್ಸನಿ ಹಾಗೂ ಯೂಸುಫ್ ಕುಂಬ್ಳಲಿಕೆ, ಮದ್ರಸಾ ಅಧ್ಯಕ್ಷರು, ಉಸ್ತುವಾರಕರು ಮತ್ತು ಊರಿನ ಹಿರಿಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಮೀಲಾದ್ ರ‌್ಯಾಲಿಯಲ್ಲಿ ದಫ್ ಪ್ರದರ್ಶನ, ಸ್ಕೌಟ್ ತಂಡದ ಪ್ರದರ್ಶನ ಹಾಗೂ ಫ್ಲವರ್ ಶೋ ವಿಶೇಷ ಆಕರ್ಷಣೆಯಾಗಿತ್ತು. ರ‌್ಯಾಲಿಯಲ್ಲಿ ಭಾಗವಹಿಸಿದವರಿಗೆ ಸಿಹಿತಿಂಡಿ ಹಾಗೂ ತಂಪು ಪಾನೀಯ ವಿತರಿಸಲಾಯಿತು.

ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಆವರಣದಿಂದ ಆರಂಭಗೊಂಡ ರ್ಯಾಲಿಯು ಫೈಸಲ್ ನಗರ, ಶಾಂತಿನಗರ ಹಾಗೂ ಪಾಂಡೇಲ್ ಮಾರ್ಗವಾಗಿ ಸಾಗಿತು. ಬಳಿಕ ದುಆ ನೆರವೇರಿಸುವ ಮೂಲಕ ರ‌್ಯಾಲಿ ಸಂಪನ್ನಗೊಂಡಿತು.

Post a Comment

Previous Post Next Post