ಕಿನ್ನಿಗೋಳಿ: ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಮಂಗಳೂರು ಹಾಗೂ ASPA FITNESS ಇವರ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿಯ ನೌಕರರ ಸೌಧದಲ್ಲಿ ರಾಜ್ಯ ಮಟ್ಟದ ಜೂನಿಯರ್ ಮತ್ತು ಸೀನಿಯರ್ (ಪುರುಷ–ಮಹಿಳಾ) ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ.
ಮೇ 1ರಿಂದ 3ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಯನ್ನು ಉದ್ಯಮಿ ಕೆ. ಭುವನಾಭಿರಾಮ ಉಡುಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಕಿನ್ನಿಗೋಳಿಯಲ್ಲಿ ಇಂತಹ ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ,” ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರುತಧರ ಡಿ. ಕಿಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ. ಲೋಕೇಶ್ ಶೆಟ್ಟಿ (ಮೆಸ್ಕಾಂ ವಿಶ್ರಾಂತ ನಿಯಂತ್ರಣಾಧಿಕಾರಿಗಳು), ಎಂ. ಜಯರಾಮ್ (ಖಜಾಂಚಿ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್), ಎಸ್. ದಯಾನಂದ್ (ಕಾರ್ಯದರ್ಶಿ), ಸಂದೀಪ್ ಕುಮಾರ್ (MD, ಮೂನ್ ಲೈಟಿಂಗ್ ಅಂಡ್ ಸೌಂಡ್ಸ್) ಹಾಗೂ ASPA FITNESSನ ಅರುಣ್ ಮತ್ತು ನವೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಶ್ ಸ್ವಾಗತಿಸಿದರು. ಎಂ.ಜಯರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಕ್ಷಿ ವಂದಿಸಿದರು.
Tags
ಮಂಗಳೂರು