ಜಿ.ಎಸ್.ಗುರುಪುರ ಸಾಹಿತ್ಯ ಹಾಗೂ ಕೆ.ಪಿ.ಮಿಲನ್ ಕುಮಾರ್ ಕಂಠದಲಿ ಮೂಡಿಬಂದ ‘ಶ್ರೀ ಕಾಳಿಕಾಂಬೆ ನಮೋ’ ಭಕ್ತಿಗೀತೆ ಏ.12ರಂದು ಲೋಕಾರ್ಪಣೆ

ಮಂಗಳೂರು : ಕೆಪಿಎಂ ಮ್ಯೂಸಿಕಲ್ ಪ್ರಸ್ತುತಪಡಿಸುವ ಶ್ರೀ ಕಾಳಿಕಾಂಬಾ ದೇವಿಯ ಮಹಿಮೆಯನ್ನು ಸಾರುವ ‘ಶ್ರೀ ಕಾಳಿಕಾಂಬೆ ನಮೋ’ ಎಂಬ ಭಕ್ತಿಗೀತೆ ಏ.12, 2026 ಭಾನುವಾರ ಮುಂಡ್ಕೂರು ನಾನಾ ಪಾಟೇಕಾರ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ ಕಲಾವಿದರ ಸಹಕಾರದಲ್ಲಿ ರೂಪುಗೊಂಡಿರುವ ಈ ಗೀತೆಗೆ ಕೆ.ಪಿ. ಮಿಲನ್ ಕುಮಾರ್ ಸಂಗೀತ ನೀಡಿದ್ದು, ಅವರೇ ಗಾಯನವನ್ನೂ ನಿರ್ವಹಿಸಿದ್ದಾರೆ. ಗೀತೆಗೆ ಜಿ.ಎಸ್. ಗುರುಪುರ ಸಾಹಿತ್ಯ ರಚಿಸಿದ್ದಾರೆ.
ವಾದ್ಯವೃಂದದಲ್ಲಿ ಪ್ರಜ್ವಲ್ ಆಚಾರ್ಯ ಉಡುಪಿ ತಬಲಾ, ದರ್ಶನ್ ಆಚಾರ್ಯ ಮೂಡುಬಿದಿರೆ ಕೊಳಲು ಹಾಗೂ ಕದ್ರಿಯ ಐಶ್ವರ್ಯ ದೇವಾಡಿಗ ವೀಣೆ ವಾದನದಲ್ಲಿ ಸಾಥ್ ನೀಡಿದ್ದಾರೆ. 

ಮಂಗಳೂರಿನ ಶಾಲನ್ ಪಿಂಟೋ ಧ್ವನಿ ಮುದ್ರಣ ಮಾಡಿದ್ದು,  ಗಣೇಶ್ ಆಚಾರ್ಯ ಅದ್ಯಪಾಡಿ ಚಿತ್ರೀಕರಣ ನಿರ್ವಹಿಸಿದ್ದಾರೆ. ಪ್ರಸಾದ್ ಆಚಾರ್ಯ ಕೊಳಂಬೆ ಸಂಕಲನ ಹಾಗೂ ಪೋಸ್ಟರ್ ವಿನ್ಯಾಸ ಮಾಡಿದ್ದು, ಜೋಸ್ಟನ್ ಅಜಿತ್ ಡಿ'ಕುನ್ಹಾ ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ಕಾರ್ಯ ನಿರ್ವಹಿಸಿದ್ದಾರೆ.

ಈ ಭಕ್ತಿಗೀತೆಯ ನಿರ್ಮಾಣಕ್ಕೆ ಶ್ರೀ ವಿಶ್ವ ಬ್ರಾಹ್ಮಣ ಯುವ ಸೇವಾ ಬಳಗ ಮತ್ತು ಮಹಿಳಾ ಬಳಗ ಮುಂಡ್ಕೂರು ಹಾಗೂ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಆಡಳಿತ ಮಂಡಳಿ ವಿಶೇಷ ಸಹಕಾರ ನೀಡಿವೆ.
ಭಕ್ತರು ಮತ್ತು ಸಂಗೀತಾಸಕ್ತರು ಇದನ್ನು ಆಲಿಸಿ ಪ್ರೋತ್ಸಾಹಿಸುವಂತೆ ತಂಡ ಮನವಿ ಮಾಡಿದೆ.

Post a Comment

Previous Post Next Post