Top News

ಬೆಳ್ತಂಗಡಿ : ಬಸ್‌ನ ಬಾಗಿಲು ತೆರೆದುಕೊಂಡು ರಸ್ತೆಗೆಸೆಯಲ್ಪಟ್ಟ ಸೋದರಿಯರು ; ಎದೆ ಝಲ್ಲೆನಿಸುವ ಘಟನೆ, ಸಿಸಿಟಿವಿ ಕ್ಯಾಮರಗಳಲ್ಲಿ ಸೆರೆ

ಕೆಎಸ್‌ಆರ್‌ಟಿಸಿ ಬಸ್‌ನ ಬಾಗಿಲು ಅನಿರೀಕ್ಷಿತವಾಗಿ ತೆರೆದುಕೊಂಡು ಇಬ್ಬರು ಸೋದರಿಯರು ವಿದ್ಯಾರ್ಥಿನಿಯರು ರಸ್ತೆ ಮೇಲೆ ಬಿದ್ದ ಘಟನೆ ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ ಸಮೀಪ ಕಳಿಯ ಗ್ರಾಮದಲ್ಲಿ ನಡೆದಿದೆ.
ಪುತ್ತೂರಿನಿಂದ ಧರ್ಮಸ್ಥಳದ ದಾರಿಯಲ್ಲಿ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಕ್ಕ-ತಂಗಿ ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆ ರೋಡ್ ತಿರುವಿನಲ್ಲಿ ವೇಗವಾಗಿ ಸಾಗುತ್ತಿದ್ದಾಗ ಬಸ್ಸಿನ ಬಾಗಿಲು ಏಕಾಏಕಿ ತೆರೆದಿದೆ. ಈ ವೇಳೆ ಬಸ್‌ನ ಬಾಗಿಲಿನ ಬಳಿಯೇ ನಿಂತಿದ್ದ ಅಕ್ಕ ಮೊದಲಿಗೆ ರಸ್ತೆಗೆ ಬಿದ್ದರೆ, ಅವರನ್ನು ರಕ್ಷಿಸಲು ಮುಂದಾದ ತಂಗಿ ಕೂಡ ನಿಯಂತ್ರಣ ತಪ್ಪಿ ಬಸ್ಸಿನಿಂದ ಹೊರಗೆ ಬಿದ್ದಿದ್ದಾರೆ.

ರಸ್ತೆ ಪಕ್ಕದ ಸಿಸಿಟಿವಿ ಕ್ಯಾಮರಗಳಲ್ಲಿ ಘಟನೆ  ಸೆರೆಯಾಗಿದ್ದು, ದೃಶ್ಯವು ನೋಡುವವರ ಎದೆ ನಡುಗಿಸುವಂತಿದೆ. ಸ್ಥಳೀಯರು ತಕ್ಷಣ ವಿದ್ಯಾರ್ಥಿನಿಯರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಸಹೋದರಿಯರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಸ್ಸಿನ ನಿರ್ವಹಣೆ ಮತ್ತು ಚಾಲಕನ ನಿರ್ಲಕ್ಷ್ಯ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Post a Comment

Previous Post Next Post