ಮಂಗಳೂರು: ವ್ಯಾಟಿಕನ್‌ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾ. ಆ್ಯಂಡ್ರಿಯಾ ಫಾನ್ರಿಯಾ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದ ಅವರು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರು ಫಾ. ಜೋಸೆಫ್, ಬಿಜು ಎಂ. ಜೋಸೆಫ್ (ಮಂಗಳೂರು) ಮತ್ತು ಮನೋಜ್ ಅವರೂ ಜೊತೆಗಿದ್ದರು. ಫಾ. ಫಾನ್ರಿಯಾ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಭೇಟಿ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ ಮತ್ತು ದಿನೇಶ್ ಅಂಚನ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
Post a Comment