ದಸರಾ ರಜೆ ವಿಸ್ತರಣೆ: ಅ.18ರವರೆಗೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ
The government has extended the Dussehra vacation as the census is not yet complete. As per the government decision, the Dussehra vacation will continue for all government schools till October 18. ಗಣತಿ ಇನ್ನೂ ಪೂರ್ಣವಾಗದ ಕಾರಣದಿಂದಾಗಿ ಸರ್ಕಾರವು ದಸರಾ ರಜೆಯನ್ನು ವಿಸ್ತರಿಸಿದೆ. ಸರ್ಕಾರದ ನಿರ್ಧಾರ ಪ್ರಕಾರ, ಅಕ್ಟೋಬರ್ 18ರವರೆಗೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ದಸರಾ ರಜೆ ಮುಂದುವರಿಯಲಿದೆ. ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿ, ಅಕ್ಟೋಬರ್ 19ಕ್ಕೂ ಮುನ್ನವೇ ಸರ್ವೇ ಮುಗಿಸಿಕೊಡುತ್ತೇವೆ ಎಂದು ಶಿಕ್ಷಕರು ಭರವಸೆ ನೀಡಿದ್ದಾರೆ. ಸರ್ವೇಗೆ ಒಟ್ಟು 12 ದಿನಗಳು ಸಿಗುತ್ತವೆ. ಈ ಅವಧಿಯೊಳಗೆ ಮುಗಿಸಬೇಕಿದೆ. ಪೂರ್ಣ ಕೆಲಸ ಆಗಬೇಕು ಎಂದಾದರೆ ರಜೆ ಕೊಡಬೇಕು ಎಂದು ಶಿಕ್ಷಕರ ಸಂಘ ನಮಗೆ ಮನವಿ ಮಾಡಿತ್ತು. ಹೀಗಾಗಿಯೇ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆಯಿಂದ ಅ.18 ರವರೆಗೆ ರಜೆಯನ್ನು ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Comments
Post a Comment