ಮಣಿಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮಕ್ಕಳು ಮೃತಪಟ್ಟ ಘಟನೆಯನ್ನು ಖಂಡಿಸಿ ನಡೆದ ಪಂಜಿನ ಮೆರವಣಿಗೆಯ ಸಂದರ್ಭ ಭದ್ರತಾ ಪಡೆಗಳು ಹಾಗೂ ಪ್ರತಿಭಟನಾ ನಿರತ ಜನರ ನಡುವೆ ಘರ್ಷಣೆ ಉಂಟಾದ ಘಟನೆ ಇಂಫಾಲದಲ್ಲಿ ನಡೆದಿದೆ.
ಏ.7ರಂದು ಬಿಷ್ಣುಪುರದ ಟ್ರೋಂಗ್ಲಾಓಬಿಯಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮಕ್ಕಳೂ ಮೃತಪಟ್ಟಿದ್ದರು. ಈ ಘಟನೆ ಕಣಿವೆಗಳಲ್ಲಿ ನಿರಂತರ ಪ್ರತಿಭಟನೆಗೆ ಕಾರಣವಾಗಿದೆ.
ಪ್ರತಿಭಟನಾ ನಿರತ ಜನರು ಲೋಕ ಭವನ ಹಾಗೂ ರಾಜ್ಯದ ಬಿಜೆಪಿ ಕಚೇರಿ ಸೇರಿದಂತೆ ಸರಕಾರಿ ಕಟ್ಟಗಳತ್ತ ಮುಂದುವರಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭ ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಯಿತು, ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಉಂಟಾಗಿದೆ.
ಸಂಜೆ 5ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿದ್ದು, ಇಲ್ಲಿಯವರೆಗೆ ನಿಯಮ ಉಲ್ಲಂಘಿಸಿದ 21 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Tags
ದೇಶ