ಮಂಗಳೂರು ಸಮೀಪದ ಕುಂಜತ್ತಬೈಲ್‌ನ ಮರಕಡದಲ್ಲಿರುವ ದ.ಕ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗ ಸ್ವರೂಪ(ರಿ) ಸಂಸ್ಥೆಯ ವತಿಯಿಂದ ‘ರಂಗೋತ್ಸವ–2026’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಬುಧವಾರ ವಿಜೃಂಭಣೆಯಿಂದ ನಡೆಯಿತು.
ರಂಗ ಸ್ವರೂಪ ತಂಡದ ಉಪಾಧ್ಯಕ್ಷರಾದ ಹುಸೈನ್ ರಿಯಾಝ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಲಾವಿದ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕ ಚೇತನ್ ಕೊಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ, ಆದರೆ ಇತಿಹಾಸವೇ ಮನುಷ್ಯನಿಗೆ ಪಾಠ ಕಲಿಸುತ್ತದೆ” ಎಂದು ತಿಳಿಸಿದರು.
ರಂಗಸ್ವರೂಪ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಇಂದು ಸ್ವತಂತ್ರವಾಗಿ ರಾಜ್ಯದಾದ್ಯಂತ ಶಿಬಿರಗಳನ್ನು ಸಂಘಟಿಸುತ್ತಿರುವುದು ಸಂಸ್ಥೆಯ ಯಶಸ್ಸಿನ ಪ್ರಮುಖ ಮೆಟ್ಟಿಲುಗಳು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಸಾಕ್ಷತ್ ಶೆಟ್ಟಿ ಕಾವೂರು, ಮರಕಡ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಕುಮಾರ್, ರಂಗ ಸ್ವರೂಪ ಕಾರ್ಯದರ್ಶಿ ಝುಬೇರ್ ಖಾನ್ ಕುಡ್ಲ, ಕಲಾವಿದ ನವೀನ್ ಅಡ್ಕರ್, ಶಿಕ್ಷಕಿ ಶೋಭಾ, ರೈಹಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಂಗ ಸ್ವರೂಪ ತಂಡದ ಹನೀಸಾ ಸವಾದ್ ಸ್ವಾಗತಿಸಿದರು. ತಸ್ಲೀಮಾ ಬಾನು ವಂದಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿದರು.
Tags
ಮಂಗಳೂರು