ಕಾರ್ಕಳದಲ್ಲಿ 2025ರ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾತ್ವಿಕ್ ಕುಲಾಲ್ (21) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಪಘಾತದ ಸಂದರ್ಭ ಸಾತ್ವಿಕ್ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಗೆ ಅವರು ಹಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಅವರು ನಿಧನರಾಗಿದ್ದಾರೆ.
ಮೃತ ಸಾತ್ವಿಕ್ ಕುಲಾಲ್ ಅವರು ಮೂಡುಬಿದಿರೆ ಪಡು ಮಾರ್ನಡ್ ನಿವಾಸಿಗಳಾದ ಶ್ಯಾಮ್ ಅಂಚನ್ ಹಾಗೂ ಜಯಂತಿ ಕುಲಾಲ್ ಅವರ ಪುತ್ರರಾಗಿದ್ದಾರೆ.
Post a Comment