ಇತ್ತೀಚೆಗೆ ನಿಧನರಾದ ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಚೆನ್ನಪ್ಪ ಸಾಲಿಯಾನ್ ಅವರಿಗೆ ನುಡಿ ನಮನ

ಮಂಗಳೂರು

ಬಜ್ಪೆ: ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಆಗಿದ್ದ ದಿ. ಚೆನ್ನಪ್ಪ ಸಾಲಿಯಾನ್ ಅವರ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮವು ಸಿದ್ಧಾರ್ಥನಗರದ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಸ್.ಎಸ್. ಜಿಲ್ಲಾ ಮುಖಂಡ ಮಂಜಪ್ಪ ಪುತ್ರನ್ ವಹಿಸಿದ್ದರು. ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚೆನ್ನಪ್ಪ ಸಾಲಿಯಾನ್ ಅವರ ಸೇವೆ ಹಾಗೂ ಸಾರ್ವಜನಿಕ ಬದುಕನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್‌ಗಳಾದ ಜೋಕಿಂ ಪಿರೇರಾ, ಕಿರಣ್ ಗುಂಡವು ಪದವು, ದಿನೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ವಸಂತ ಬೆರ್ನಾಡ್, ಜಗನ್ನಾಥ್ ಸಾಲಿಯಾನ್, ದೇವೇಂದ್ರ ಮೂಲ್ಯ ಅಗ್ರಹಾರ, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಉದ್ಯಮಿ ಕಿಶನ್ ಶೆಟ್ಟಿ, ಮಳವೂರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಾಸು ಪೇಜಾವರ, ಬಜ್ಪೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಕುಮಾರ್ ಕಾನ, ಬಿಲ್ಲವ ಸಮಾಜ ಸೇವಾ ಸಂಘ ತೋಕೂರು ಪೇಜಾವರ ಅಧ್ಯಕ್ಷ ಕರುಣಾಕರ ಸುವರ್ಣ, ಗೋಪಾಲ್ ಸಾಲಿಯಾನ್, ಯುವ ಕಾಂಗ್ರೆಸ್ ಮುಖಂಡ ಮಂಜು ಪ್ರಸಾದ್ ಶೆಟ್ಟಿ, ಮಳವೂರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ್ ಬಂಗೇರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಚೆನ್ನಪ್ಪ ಸಾಲಿಯಾನ್ ಅವರ ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಯನ್ನು ಸ್ಮರಿಸಿ ಗಣ್ಯರು ನುಡಿ ನಮನ ಸಲ್ಲಿಸಿದರು.
ವೆಂಕಪ್ಪ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Post a Comment

Previous Post Next Post