ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ನಗರದ ಬಿಷಪ್ಸ್ ಹೌಸ್ನಲ್ಲಿ ಸೌಹಾರ್ದಯುತವಾಗಿ ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ವಂದನೀಯ ಫಾದರ್ ರೂಪೇಶ್ ಮಾಡ್ತಾ ಸೇರಿದಂತೆ ಕಾಂಗ್ರೆಸ್ನ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಜಾನ್ ಬಿ. ಮೊಂತೆರೋ, ಆಲ್ವಿನ್ ಪ್ರಕಾಶ್ ಸಿಕ್ವೇರಾ, ಲಾರೆನ್ಸ್ ಡಿಸೋಜಾ, ಮೆಲ್ವಿನ್ ಡಿಸೋಜಾ, ನೆಲ್ಸನ್ ಮೊಂತೆರೋ, ನವೀನ್ ಲೋಬೋ, ಲ್ಯಾನ್ಸ್ಲಾಟ್ ಪಿಂಟೋ, ಕ್ರಿಸ್ಟನ್ ಮೆನೆಜಸ್, ನ್ಯಾನ್ಸಿ ನೊರೊನ್ಹಾ, ಆಲ್ಸ್ಟನ್ ಡಿಕುನ್ಹಾ, ವಿಲ್ಫ್ರೆಡ್ ಮೊಂತೆರೋ, ಪಯಸ್ ಮೊಂತೆರೋ, ಲ್ಯಾನ್ಸಿ ಲಸ್ರಾದೊ, ಅವಿತಾ ನೊರೊನ್ಹಾ, ನೀತು ಡಿಸೋಜಾ, ಮೇರಿ ಪಿಂಟೋ, ರೀಟಾ ಡಿಸೋಜಾ, ಸ್ಟಾನ್ಲಿ ಬಂಟ್ವಾಳ್, ವೀಣಾ ಹಾಗೂ ನ್ಯಾಯವಾದಿ ಎ.ಪಿ. ಮೊಂತೆರೋ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
Post a Comment