ಮಂಗಳೂರು : ಸಾಮರಸ್ಯ ಮಂಗಳೂರು ನೇತೃತ್ವದಲ್ಲಿ ಗೋಶಾಲೆಯಲ್ಲಿ ಗೋಪೂಜೆ

ಮಂಗಳೂರು: ನಗರದ ಬಜಿಲಕೇರಿ ಶ್ರೀ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಗುರುರಾಜ್ ಭಟ್ ಅವರ ಮಾಲೀಕತ್ವದ ಗೋಶಾಲೆಯಲ್ಲಿ ಸಾಮರಸ್ಯ ಮಂಗಳೂರು ಸಂಘಟನೆಯ ನೇತೃತ್ವದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, “ಗೋವು 33 ಕೋಟಿ ದೇವತೆಗಳ ಆವಾಸ ಸ್ಥಾನ ಎಂಬ ನಂಬಿಕೆಯಿದೆ. ಗೋವನ್ನು ಪೂಜಿಸುವುದರಿಂದ ಸಕಲ ಪಾಪಗಳು ನಿವಾರಣೆಯಾಗುತ್ತವೆ ಹಾಗೂ ಗೋವಿಗೆ ಗೋಗ್ರಾಸ ನೀಡುವುದರಿಂದ ಮಹಾನೈವೇದ್ಯ ಸಮರ್ಪಣೆಯ ಫಲ ಲಭಿಸುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಯೋಗೀಶ್ ನಾಯಕ್, ಸಮರ್ಥ್ ಭಟ್, ಸಿತಾರಾ, ರಾಧಿಕಾ ನಾಯಕ್, ನೀತ್ ಶರಣ್, ರಾಜೇಶ್ ದೇವಾಡಿಗ, ಟಿ.ಸಿ. ಗಣೇಶ್, ಸೀತಾರಾಮ್ ಶೆಟ್ಟಿ, ಸುನಿತಾ, ಸುನಂದಾ, ಮಾತಾಜಿ, ರತಿಕಾ, ರಚಿತಾ, ಪುಷ್ಪ ಆರ್. ಶೆಟ್ಟಿ, ರುಕ್ಮಿಣಿ, ಮೀರಾದೇವಿ, ಗಟು ಕವನ್ ಹಾಗೂ ಮೋಹನ್ ಕವನ್ ಉಪಸ್ಥಿತರಿದ್ದರು.

Post a Comment

Previous Post Next Post