ಮಂಗಳೂರು : ಯುವಕರಲ್ಲಿ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನ ಬೆಳೆಸುವಲ್ಲಿ ರೋಟರಾಕ್ಟ್ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಯುವಕರು ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜ ಸೇವಾ ಕಾರ್ಯಗಳಲ್ಲಿ ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬಿ.ಎನ್. ರವೀಂದ್ರ ಸಲಹೆ ನೀಡಿದರು.
ನಗರದ ಹೋಟೆಲ್ ಸೀವ್ಯೂ ಸಭಾಂಗಣದಲ್ಲಿ ಆ. 4ರಂದು ನಡೆದ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನೂತನ ತಂಡಕ್ಕೆ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಕ್ಷಣ್ ಅವರು ತಮ್ಮ ಅವಧಿಯಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ, ಪರಿಸರ ಸಂರಕ್ಷಣೆ, ವಸತಿ ಹಾಗೂ ಸಮಾಜದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿ, ಅವುಗಳ ಯಶಸ್ವಿ ಅನುಷ್ಠಾನಕ್ಕೆ ಸರ್ವ ಸದಸ್ಯರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ದೀಪ್ತಿ, ಹರ್ಷಿತಾ, ನಿಶಾಂತ್ ಮತ್ತು ರಂಜನ್ ಅವರು ರೋಟರಾಕ್ಟ್ ಕ್ಲಬ್‌ಗೆ ನೂತನ ಸದಸ್ಯರಾಗಿ ಸೇರ್ಪಡೆಯಾದರು.
ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಜಯಪ್ರಕಾಶ್ ರಾವ್ ಅವರು ಕಳೆದ ಮೂರು ದಶಕಗಳಲ್ಲಿ ಸಂಸ್ಥೆ ಸಾಧಿಸಿರುವ ಪ್ರಗತಿ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ನಿರ್ಗಮನ ಅಧ್ಯಕ್ಷ ಅಕ್ಷಯ್ ರೈ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ವಿವೇಕ್ ರಾವ್ ವಾರ್ಷಿಕ ವರದಿ ಮಂಡಿಸಿದರು. ಅಲ್ಮಾ ಪಿಂಟೋ ಮತ್ತು ಡೆರಿಲ್ ಸ್ಟೀವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಮುಕೇಶ್ ವಂದಿಸಿದರು.
ನೂತನ ನಿರ್ದೇಶಕರು:
ಮಣಿಕಂಠ – ಸಂಸ್ಥೆ ಸೇವೆ
ಶಮನ್ – ವೃತ್ತಿಪರ ಸೇವೆ
ವಿವೇಕ್ ರಾವ್ – ಅಂತಾರಾಷ್ಟ್ರೀಯ ಸೇವೆ
ಶ್ರದ್ಧಾ ಕೇಶವ್ – ಸಮುದಾಯ ಸೇವೆ
ಕದ್ರಿ ವಿಕ್ರಮ್ – ಯುವಜನ ಸೇವೆ
ಪ್ರತೀಕ್ ಶೆಟ್ಟಿ – ಕೋಶಾಧಿಕಾರಿ
ಮಹಮ್ಮದ್ ಮನ್ಸೂರ್ – ದಂಡಾಧಿಕಾರಿ
Post a Comment