ಬಜಪೆ : ಬೈಲು ಕೊಳಂಬೆ ಶ್ರೀಮತಿ ಮತ್ತು ಶ್ರೀ ಜಯರಾಮ ಆಚಾರ್ಯ ಅವರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಗೆ ನೂತನ ರಜತ ಕಿರೀಟವನ್ನು ಮಂಗಳವಾರ ಸಮರ್ಪಿಸಲಾಯಿತು.
ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪ ವಠಾರದಲ್ಲಿ ಎರಡನೇ ಮೇಳದಿಂದ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ರಜತ ಕಿರೀಟವನ್ನು ಕಲಾಮಾತೆಗೆ ಅರ್ಪಿಸಲಾಯಿತು.
ಈ ಸಂದರ್ಭ ಕುಟುಂಬದ ಹಿರಿಯರು ಸ್ಥಳೀಯ ಮುಖಂಡರು ಯಕ್ಷಾಭಿಮಾನಿಗಳು ಉಪಸ್ಥಿತರಿದ್ದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣರು ಭೇಟಿ ನೀಡಿ ಆಶೀರ್ವದಿಸಿದರು.
Tags
ಮಂಗಳೂರು