Top News

ವಕ್ಫ್ ಆಸ್ತಿ ಸಂರಕ್ಷಣೆ ; ಮುಸ್ಲಿಂ ಸಮುದಾಯದವರಿಂದಲೇ ಹೆಚ್ಚಿನ ಒತ್ತುವರಿ ಸಚಿವ ಜಮೀರ್ ಅಹ್ಮದ್ ಖಾನ್

ರಾಜ್ಯದಲ್ಲಿರುವ ವಕ್ಫ್ ಮಂಡಳಿಯ ಆಸ್ತಿಗಳ ಒತ್ತುವರಿಯ ಕುರಿತು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸದನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ಆಸ್ತಿಗಳ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

​ಒತ್ತುವರಿಯ ವಿವರ: ರಾಜ್ಯಾದ್ಯಂತ ಒಟ್ಟು 17,969 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ. ವಿಶೇಷವೆಂದರೆ, ಈ ಆಸ್ತಿಯನ್ನು ಬೇರೆ ಧರ್ಮದವರಾಗಲಿ ಅಥವಾ ದೇವಸ್ಥಾನಗಳಾಗಲಿ ಕಬಳಿಸಿಲ್ಲ ಬದಲಾಗಿ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.

​ಆಸ್ತಿಯ ಅಂಕಿ-ಅಂಶ:  ರಾಜ್ಯ ವಕ್ಫ್ ಮಂಡಳಿಯ ಒಟ್ಟು ವ್ಯಾಪ್ತಿ: 1,12,860 ಎಕರೆ.
​ಸದ್ಯ ಮಂಡಳಿಯ ವಶದಲ್ಲಿರುವುದು: ಕೇವಲ 20,054 ಎಕರೆ.

​ವಿವಿಧ ಕಾಯ್ದೆಗಳಡಿ ಹೋದ ಜಮೀನು: ಇನಾಂ ಅಬಾಲಿಷನ್ ಆಕ್ಟ್ ಅಡಿ 47,263 ಎಕರೆ ಹಾಗೂ ಭೂ ಸುಧಾರಣೆ ಕಾಯ್ದೆಯಡಿ 23,627 ಎಕರೆ ಆಸ್ತಿ ಕೈತಪ್ಪಿದೆ.

​ವಕ್ಫ್ ಅದಾಲತ್ ಉದ್ದೇಶ: ವಕ್ಫ್ ಆಸ್ತಿಯು ಸರ್ಕಾರದ ಸ್ವತ್ತಲ್ಲ, ಅದು ಸಮುದಾಯದ ಏಳಿಗೆಗಾಗಿ ದಾನವಾಗಿ ಬಂದಿರುವುದು. ಈ ಆಸ್ತಿಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಿ, ಸಮುದಾಯದ ಒಳಿತಿಗಾಗಿ ಬಳಸುವ ಉದ್ದೇಶದಿಂದಲೇ ಸರ್ಕಾರ 'ವಕ್ಫ್ ಅದಾಲತ್' ಆಯೋಜಿಸುತ್ತಿದೆ ಎಂದು ಅವರು ವಿವರಿಸಿದರು.

Post a Comment

Previous Post Next Post