ಬಜಪೆ : ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ ; ದಲಿತ ಚಳವಳಿಗೆ ತುಂಬಲಾರದ ನಷ್ಟ

ಮಂಗಳೂರು, ಜುಲೈ 22: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು, ಡಿ.ಸಿ. ಮನ್ನಾ ಭೂಮಿ ಹೋರಾಟದ ಮುಂಚೂಣಿ ನಾಯಕರು ಹಾಗೂ ಹಿರಿಯ ದಲಿತ ಮುಖಂಡರಾದ  ಎಂ. ದೇವದಾಸ್ ಅವರು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಸುಕಿನ ಜಾವ ನಿಧನರಾದರು.

ದಲಿತರ ಮೇಲಿನ ಶೋಷಣೆ, ಅಸಮಾನತೆ, ದೌರ್ಜನ್ಯ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ತಮ್ಮ ಇಡೀ ಬದುಕನ್ನೇ ಸಮರ್ಪಿಸಿಕೊಂಡು ಹೋರಾಟ ನಡೆಸಿದ ಎಂ. ದೇವದಾಸ್ ಅವರು ದಶಕಗಳ ಕಾಲ ದಲಿತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶೋಷಿತರ ಧ್ವನಿಯಾಗಿ, ನ್ಯಾಯದ ಪ್ರತೀಕವಾಗಿ ಹಾಗೂ ಸಂಘಟನೆಯ ಶಕ್ತಿಯಾಗಿ ಅವರು ನಡೆಸಿದ ಅನೇಕ ಹೋರಾಟಗಳು ರಾಜ್ಯದ ದಲಿತ ಚಳವಳಿಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ.

ಅವರ ನಿಧನದಿಂದ ದಲಿತ ಚಳವಳಿಗೆ ತುಂಬಲಾರದ ನಷ್ಟ ಉಂಟಾಗಿದ್ದು, ವಿವಿಧ ದಲಿತ, ಪ್ರಗತಿಪರ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆದರ್ಶಗಳು ಹಾಗೂ ಹೋರಾಟದ ಪರಂಪರೆ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿದಾಯಕವಾಗಿರಲಿವೆ ಎಂದು ಶ್ರದ್ಧಾಂಜಲಿ ಸಂದೇಶಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Post a Comment

Previous Post Next Post