ಕಳವಾರಿನಲ್ಲಿ ತಲವಾರಿನಿಂದ ದಾಳಿಗೆ ಯತ್ನ ; ವಾಮಂಜೂರು ನಿವಾಸಿ ನವೀನ್ ಬಂಧನ

ಮಂಗಳೂರು: ವಾಮಂಜೂರು ನಿವಾಸಿ ನವೀನ್ ಎಂಬಾತ ವೈವಾಹಿಕ ಕಲಹದ ಹಿನ್ನಲೆಯಲ್ಲಿ ಕತ್ತಿ ಹಿಡಿದು ದಾಳಿ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. 

ಪತಿಯಿಂದ ವಿಚ್ಛೇದನಗೊಂಡು ಕಳೆದ ಕೆಲವು ತಿಂಗಳುಗಳಿಂದ ಜೋಕಟ್ಟೆಯಲ್ಲಿ ಪ್ರತ್ಯೇಕವಾಗಿ ಪತ್ನಿ ವಾಸವಾಗಿದ್ದಳು. ನವೀನ್, ಶುಕ್ರವಾರ ರಾತ್ರಿ ಕತ್ತಿ ಹಿಡಿದು ಕಳವಾರು ನಿವಾಸಿ ದೇವಿ ಪ್ರಸಾದ್ ಹಾಗೂ ಅವರ ಪೋಷಕರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ದೇವಿ ಪ್ರಸಾದ್ ತಕ್ಷಣ 112 ಸಹಾಯವಾಣಿ ಸಂಪರ್ಕಿಸಿದ್ದು, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ನವೀನ್ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾನೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ನವೀನ್‌ನನ್ನು ವಶಕ್ಕೆ ಪಡೆದಿದ್ದಾರೆ.
ದೇವಿ ಪ್ರಸಾದ್ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಕೊಲೆ ಯತ್ನ (IPC 307) ಹಾಗೂ ಅಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಆರೋಪಿ ಪ್ರಸ್ತುತ ಪೊಲೀಸ್ ಠಾಣೆಯಲ್ಲಿ ಇದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ.

Post a Comment

Previous Post Next Post