ಮಂಗಳೂರು: ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪಿಯನ್ಸ್’ ವೈಟ್ ಗೋಲ್ಡ್ ವಿನ್ನರ್ ಹಾಗೂ ‘ಸ್ವರ ಪುತ್ರ’ ಬಿರುದಾಂಕಿತ ಅಶ್ಮಿತ್ ಎ.ಜೆ. ಅವರನ್ನು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಹಾಗೂ ಇದರ ಅಂಗ ಸಂಸ್ಥೆಯಾದ ಚೈತನ್ಯ ಸಹಕಾರಿ ಸಂಘದ ಜಂಟಿ ಸಹಭಾಗಿತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಮಿನಿ ವಿಧಾನಸೌಧ ಸಂಕೀರ್ಣದಲ್ಲಿರುವ ನಂದಿನಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಂಜೀವ ಕೋಟ್ಯಾನ್, ಉಪಾಧ್ಯಕ್ಷ ಅಣ್ಣು ಕುಂಜತ್ತ್ ಬೈಲ್, ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ದಿನಕರ್ ಪಿ., ಸದಸ್ಯೆ ಸವಿತಾ ಸತೀಶ್ ಹಾಗೂ ಹಿತೈಷಿಗಳಾದ ನಾಗೇಶ್ ಬಲ್ಮಠ ಮತ್ತು ರಾಕೇಶ್ ಕುಂದರ್ ಕರಂಬಾರು ಉಪಸ್ಥಿತರಿದ್ದರು.
ಎರಡು ವರ್ಷಗಳ ಹಿಂದಿನ ಸ್ಪರ್ಧೆಯಲ್ಲೂ ಅಶ್ಮಿತ್‌ಗೆ ಪ್ರಥಮ ಬಹುಮಾನ : ಅಶ್ಮಿತ್ ಅವರ ಈ ಸಾಧನೆಗೆ ಮತ್ತೊಂದು ವಿಶೇಷ ಕಾಕತಾಳೀಯವೂ ಇದೆ. 2024ರ ಫೆಬ್ರವರಿ 10ರಂದು ನಗರದ ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘ ಹಾಗೂ ಚೈತನ್ಯ ಸಹಕಾರಿ ಸಂಘದ ಜಂಟಿ ಸಹಭಾಗಿತ್ವದಲ್ಲಿ ನಡೆದ ವಾರ್ಷಿಕೋತ್ಸವದ ಸಂಗೀತ ಸ್ಪರ್ಧೆಯಲ್ಲಿ ಅಶ್ಮಿತ್ ಪ್ರಥಮ ಬಹುಮಾನ ಪಡೆದಿದ್ದರು.
ಎರಡು ವರ್ಷಗಳ ಹಿಂದೆ ಇದೇ ವೇದಿಕೆಯ ಸಹಭಾಗಿತ್ವದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಅಶ್ಮಿತ್, ಇದೀಗ ‘ಸ ರಿ ಗ ಮ ಪ ಲಿಟಲ್ ಚಾಂಪಿಯನ್ಸ್’ನಲ್ಲಿ ವೈಟ್ ಗೋಲ್ಡ್ ವಿನ್ನರ್ ಆಗಿ ಹೊರಹೊಮ್ಮಿರುವುದು ವಿಶೇಷ ಕಾಕತಾಳೀಯವಾಗಿದೆ.
Post a Comment