ಮಂಗಳೂರು: ವಿದ್ಯಾ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ವಾಮಂಜೂರಿನಲ್ಲಿ ನಡೆದ ಗುರುಪುರ ಹೋಬಳಿ ಮಟ್ಟದ 17ರ ವಯೋಮಿತಿಯೊಳಗಿನ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸರ್ಕಾರಿ ಪ್ರೌಢಶಾಲೆ ಅದ್ಯಪಾಡಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 9 ತಂಡಗಳು ಭಾಗವಹಿಸಿದ್ದ ಪಂದ್ಯಾಟದ ಮೊದಲ ಸುತ್ತಿನಲ್ಲಿ ಮೌಲಾನಾ ಆಜಾದ್ ಪ್ರೌಢಶಾಲೆ, ಗುರುಕಂಬಳ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ ಅದ್ಯಪಾಡಿ ತಂಡ, ಎರಡನೇ ಪಂದ್ಯದಲ್ಲಿ ಸರ್ಕಾರಿ ಪ್ರೌಢಶಾಲೆ, ಮುಚ್ಚೂರು ತಂಡದ ವಿರುದ್ಧವೂ ನೇರ ಸೆಟ್‌ಗಳಲ್ಲಿ ಜಯ ಸಾಧಿಸಿತು.
ಮೂರನೇ ಪಂದ್ಯದಲ್ಲಿ ಸರ್ಕಾರಿ ಪ್ರೌಢಶಾಲೆ, ಕುಪ್ಪೆಪದವು ತಂಡವನ್ನು ನೇರ ಸೆಟ್‌ಗಳಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಸರ್ಕಾರಿ ಪ್ರೌಢಶಾಲೆ, ಮಳಲಿ ತಂಡದ ವಿರುದ್ಧ ಹೋರಾಡಿದ ಅದ್ಯಪಾಡಿ ತಂಡ ವೀರೋಚಿತ ಸೋಲು ಅನುಭವಿಸಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಪಂದ್ಯಾಟದಲ್ಲಿ ಅದ್ಯಪಾಡಿಯ ವಿದ್ಯಾರ್ಥಿ ಮೊಹಮ್ಮದ್ ರಾಹಿಫ್ ಅವರು ‘ಬೆಸ್ಟ್ ಅಟ್ಯಾಕರ್’ ಪ್ರಶಸ್ತಿಗೆ ಭಾಜನರಾದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು, ತರಬೇತಿ ನೀಡಿದ ಊರಿನವರು ಮತ್ತು ಹಳೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ತಂಡದ ಅತ್ಯುತ್ತಮ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿಕೊಟ್ಟ ಅಬ್ದುಲ್ ರಜಾಕ್ ಅವರಿಗೆ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
Post a Comment