‘ಕೃಷ್ಣಾರ್ಪಣಂ’ ಭಕ್ತಿಗೀತೆಯ ನಿರ್ಮಾಣ ಹಾಗೂ ನಿರ್ದೇಶನದ ಹೊಣೆಗಾರಿಕೆಯನ್ನು ಸುಮಂತ್ ಪೂಜಾರಿ ಕಡಂದಲೆ ವಹಿಸಿಕೊಂಡಿದ್ದಾರೆ. ಗೀತೆಗೆ ಸಾಹಿತ್ಯ ಹಾಗೂ ರಾಗಸಂಯೋಜನೆಯನ್ನು ಆರ್. ಪ್ರದೀಪ್ ಕುಮಾರ್ ಕಾಪು ನೀಡಿದ್ದು, ಕೆ.ಪಿ. ಮಿಲನ್ ಕುಮಾರ್ ಸಟ್ಟೇರಿಪೇಟೆ ಗಾಯನ ಹಾಗೂ ಸಂಗೀತ ಸಂಯೋಜನೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.
ಗೀತೆಯ ದೃಶ್ಯರೂಪಕ್ಕೆ ಗಣೇಶ್ ಆಚಾರ್ಯ ಅದ್ಯಪಾಡಿ ಛಾಯಾಗ್ರಹಣ ಮಾಡಿದ್ದಾರೆ. ಪ್ರಸಾದ್ ಆಚಾರ್ಯ ಕೊಳಂಬೆ ಸಂಕಲನದ ಜತೆಗೆ ಪ್ರಚಾರಕಲೆಯನ್ನೂ ನಿರ್ವಹಿಸಿದ್ದಾರೆ. ನೃತ್ಯ ನಿರ್ದೇಶನವನ್ನು ಕೃಷ್ಣಾಪುರದ ದಿಗ್ವಿಜಯ್ ಡ್ಯಾನ್ಸರ್ಸ್‌ನ ಶ್ರಾವ್ಯ ಆಚಾರ್ಯ ಮಾಡಿದ್ದಾರೆ. ಗೀತೆಯ ದೃಶ್ಯಗಳಲ್ಲಿ ಪ್ರತಿಮಾ ಶೆಟ್ಟಿ ಮತ್ತು ಡಿಯಾನ್ ಎಸ್. ಶೆಟ್ಟಿ ಅಭಿನಯಿಸಿದ್ದಾರೆ.
ಭಕ್ತಿಗೀತೆಯ ಸಂಗೀತ ಸಂಯೋಜನೆಗೆ ಪೂರಕವಾಗಿ ಹಲವು ಕಲಾವಿದರು ಕೈಜೋಡಿಸಿದ್ದಾರೆ. ಮುಲ್ಕಿಯ ಸಪ್ತಸ್ವರ ಸ್ಟುಡಿಯೋದಲ್ಲಿ ಕಾರ್ತಿಕ್ ಮುಲ್ಕಿ ಧ್ವನಿಮುದ್ರಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದರ್ಶನ್ ಆಚಾರ್ಯ ಮೂಡುಬಿದಿರೆ ಕೊಳಲು ವಾದನದ ಮೂಲಕ ಸಂಗೀತಕ್ಕೆ ವಿಶೇಷ ಮೆರುಗು ನೀಡಿದ್ದಾರೆ. ತಬಲಾ ವಾದನವನ್ನು ದರ್ಶನ್ ದೇವಾಡಿಗ ಮುಲ್ಕಿ ನಿರ್ವಹಿಸಿದ್ದಾರೆ. ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ಕಾರ್ಯವನ್ನು ಜೋಸಿನ್ ಆಶಿತ್ ಡಿಸೋಜಾ ಮಾಡಿದ್ದಾರೆ. ಉಡುಪಿಯ ಪ್ರಜ್ವಲ್ ಸುವರ್ಣ ಅವರು ವಿಶೇಷ ಸಹಕಾರ ನೀಡಿದ್ದಾರೆ.
ಸಾಂಪ್ರದಾಯಿಕ ಭಕ್ತಿಯ ಭಾವನೆಗಳನ್ನು ಆಧುನಿಕ ಸಂಗೀತ ಮತ್ತು ದೃಶ್ಯ ಮಾಧ್ಯಮದೊಂದಿಗೆ ಸಂಯೋಜಿಸುವ ಪ್ರಯತ್ನವಾಗಿ ‘ಕೃಷ್ಣಾರ್ಪಣಂ’ ಮೂಡಿಬಂದಿದೆ. ಗೀತೆಯ ಸಾಹಿತ್ಯ, ಸಂಗೀತ, ಗಾಯನ ಹಾಗೂ ದೃಶ್ಯ ಸಂಯೋಜನೆ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆಯಿದೆ. ಶ್ರೀಕೃಷ್ಣನ ಮೇಲಿನ ಭಕ್ತಿ ಮತ್ತು ಸಮರ್ಪಣಾ ಭಾವವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಹಾಡು ಭಕ್ತರ ಮನಸೂರೆಗೊಳ್ಳುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
‘ಕೃಷ್ಣಾರ್ಪಣಂ’ ಸೆಪ್ಟೆಂಬರ್ 2ರಂದು ಯೂಟ್ಯೂಬ್‌ನಲ್ಲಿ ಅನಾವರಣಗೊಳ್ಳಲಿದ್ದು, K P Milan Kumar ಹಾಗೂ Momentavibeofficial ಯೂಟ್ಯೂಬ್ ಚಾನೆಲ್‌ಗಳಲ್ಲಿ ಗೀತೆಯನ್ನು ವೀಕ್ಷಿಸಬಹುದಾಗಿದೆ.
Post a Comment